

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಆರೋಗ್ಯ ತಪಾಸಣಾ ಶಿಬಿರಗಳು ಒಂದು ದಿನಕ್ಕೆ ಸೀಮಿತವಾಗಬಾರದು. ಶಿಬಿರ ನಡೆದ ಬಳಿಕ ಚಿಕಿತ್ಸೆ ಬೇಕಾದರೆ ಅದಕ್ಕೆ ಬೇಕಾದ ವ್ಯವಸ್ಥೆ ವಾಡಬೇಕಿದ್ದು, ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಆಗ ಶಿಬಿರ ವಾಡಿದ್ದಕ್ಕೂ ಸಾರ್ಥಕ ಎಂದು ಕುರ್ನಾಡು ಗ್ರಾಪಂ ವಾಜಿ ಅಧ್ಯಕ್ಷ ಪ್ರಶಾಂತ್ ಕಾಜವ ಹೇಳಿದರು. ಪಜೀರ್ ಗ್ರಾಮದ ಸಾಂಬಾರತೋಟ ಖಿದ್ಮತುಲ್ ಅಸೋಸಿಯೇಷನ್, ನೂರಾನಿಯಾ ಜವಾಅತ್ ಕಮಿಟಿ ಕತ್ತರ್ ಟಕ ಹಾಗೂ ಯೇನೆಪೊಯ ಆಯುರ್ವೇದ ಮತ್ತು ನ್ಯಾಚುರೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಭಾಗಿತ್ವದಲ್ಲಿ ಸಾಂಬಾರತೋಟ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆರೋಗ್ಯ ಉಚಿತ ತಪಾಸಣೆ ಮತ್ತು ಹಿಜಾಮ ಶಿಬಿರದಲ್ಲಿ ವಾತನಾಡಿದರು. ಈ ಸಂದರ್ಭ ಶಾಲಾ ಊಟದ ಕೊಠಡಿ ಉದ್ಘಾಟಿಸಲಾಯಿತು. ರೆಡ್‌ಕ್ರಾಸ್ ವತಿಯಿಂದ ನೀಡಲಾದ ಗಾಲಿಕುರ್ಚಿಯನ್ನು ವಿದ್ಯಾರ್ಥಿನಿ ಮಿಸ್ಬಾಳಿಗೆ ಹಸ್ತಾಂತರಿಸಲಾಯಿತು. ಪ್ರಶಾಂತ್ ಕಾಜವ, ರಾಜ್ಯಮಟ್ಟದ ಟೇಕ್ವಾಂಡೋದಲ್ಲಿ ದ್ವಿತೀಯ ಬಹುವಾನ ಪಡೆದ ವಿದ್ಯಾರ್ಥಿ ಅಯಾಝ್ ಮತ್ತು ಮಹಮ್ಮದ್ ಅನಸ್ ಅವರನ್ನು ಸನ್ಮಾನಿಸಲಾಯಿತು. ನೂರಾನಿಯಾ ಜುವಾ ಮಸೀದಿಯ ಮುದರ್ರಿಸ್ ಅಬ್ದುಲ್ ರರಝಾಕ್ ಅಹ್ಸನಿ ಕಾರ್ಯಕ್ರಮ ಉದ್ಘಾಟಿಸಿದರು. ನೂರಾನಿಯಾ ಜುವಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಪಜೀರ್ ಗ್ರಾಪಂ ಅಧ್ಯಕ್ಷ ಮಹಮ್ಮದ್ ರಫೀಕ್, ನೂರಾನಿಯಾ ಜವಾಅತ್ ಸಮಿತಿ ಕತ್ತರ್ ಸಮಿತಿ ಕೋಶಾಧಿಕಾರಿ ಎಸ್.ಕೆ.ಅಬ್ದುಲ್ ಖಾದರ್, ಕಟ್ಟಡ ಸಮಿತಿ ಅಧ್ಯಕ್ಷ ಮೂಸಾ ಕುಂಞಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಚ್.ಅಬ್ದುಲ್ಲಾ, ಗ್ರಾಪಂ ಸದಸ್ಯರಾದ ಶಫೀಕ್ ಅರ್ಕಾಣ, ಸಿರಾಜ್ ಅರ್ಕಾಣ, ಖತೀಬ್ ಹಾಫಿಲ್ ರರಝಾಕ್ ಉಸ್ತಾದ್, ಸವಾಜ ಸೇವಕ ಉಸ್ಮಾನ್ ಕೊಡಕ್ಕಲ್, ಮುಖ್ಯಶಿಕ್ಷಕ ಮಲ್ಲಿಕಾರ್ಜುನ, ಖಿದ್ಮತುಲ್ ಇಸ್ಲಾಂ ಅಸೋಸಿಯೇಷನ್ ಗೌರವಾಧ್ಯಕ್ಷ ಎ.ನಾಸೀರ್, ವಾಜಿ ಅಧ್ಯಕ್ಷ ಅಬ್ದುಲ್ಲಾ, ಯೇನೆಪೊಯ ಆಸ್ಪತ್ರೆ ಶಿಬಿರ ಸಂಯೋಜಕ ಅಬ್ದುಲ್ ರರಝಾಕ್, ಎಚ್.ಬಿ.ಟಿ.ಅಮೀರ್ ಮೊದಲಾದವರು ಉಪಸ್ಥಿತರಿದ್ದರು. ಅಸೋಸಿಯೇಷನ್ ಕಾರ್ಯದರ್ಶಿ ಸಂಶುದ್ದೀನ್ ಸ್ವಾಗತಿಸಿದರು. ಅಧ್ಯಕ್ಷ ಅಸ್ಗರ್ ಸಾಂಬಾರತೋಟ ನಿರೂಪಿಸಿದರು.
ಯುವಕರು ಎಲ್ಲ ಜಾತಿ, ಧರ್ಮೀಯರನ್ನು ಒಟ್ಟುಗೂಡಿಸಿಕೊಂಡು ಮುಂದುವರಿಯುವುದು ಊರಿನಲ್ಲಿ ಸೌಹಾರ್ದ ವಾತಾವರಣ ನೆಲೆಸಲು ಸಹಕಾರಿ. ಸ್ಥಳೀಯರ ಆರೋಗ್ಯ ಕಾಪಾಡುವ ಶಿಬಿರದ ಜತೆ ಸಾಧಕ ಮಕ್ಕಳನ್ನು ಸನ್ಮಾನಿಸಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿರುವುದು ಉತ್ತಮ ಕಾರ್ಯ. ಮಹಮ್ಮದ್ ರಫೀಕ್, ಅಧ್ಯಕ್ಷರು, ಪಜೀರ್ ಗ್ರಾಮ ಪಂಚಾಯಿತಿ