

ಹುಬ್ಬಳ್ಳಿ: ಎಂ.ಬಿ. ಹುರಳಿಕೊಪ್ಪಿ ಟ್ರಸ್ಟ್, ಶ್ರೇಯಾ ಆಪ್ಟಿಕಲ್ಸ್, ಶ್ರೇಯಾ ಜನಸೇವಾ ಫೌಂಡೇಷನ್ ಆಶ್ರಯದಲ್ಲಿ ನಗರದ ಅಶೋಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆ. 12ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ಎಲುಬು ಮತ್ತು ಕೀಲು ಜೋಡಣೆ, ಸಂದುಗಳು, ಫಿಜಿಯೋಥೆರಪಿ, ಕಣ್ಣು, ಅಸ್ತಮಾ, ಅಲರ್ಜಿ, ಚೆಸ್ಟ್ ಚಿಕಿತ್ಸಾ ಶಿಬಿರ ನಡೆಯಲಿದೆ. ತಜ್ಞ ವೈದ್ಯರ ತಂಡ ಭಾಗವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.