

ಹುಬ್ಬಳ್ಳಿ: ಆಧುನಿಕ ಜೀವನ ಪದ್ಧತಿಯ ಪರಿಣಾಮದಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ತುಂಬಾ ಆತಂಕಕಾರಿ ಸಂಗತಿ ಎಂದು ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ರಿಸರ್ಚ್ ಇನ್ ಸ್ಟಿಟ್ಯೂಟ್ ಅಂಕಾಲಾಜಿಸ್ಟ್ ಡಾ. ಉಮೇಶ ಹಳ್ಳಿಕೇರಿ ಹೇಳಿದರು.
ಇಲ್ಲಿಯ ಉಣಕಲ್ಲನಲ್ಲಿರುವ ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟಿನಿಯಲ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಮಕ್ಕಳ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸುವುದರ ಜೊತೆಗೆ ಆಗಾಗ ಮಕ್ಕಳನ್ನು ಗಮನಿಸುತ್ತಿರಬೇಕು. ಏನಾದರೂ ಲಕ್ಷಣಗಳು ಕಂಡು ಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ವಾಸನ್ ಐ ಕೇರ್ ಆಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ ಹಜಾರ, ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟೀನಿಯಲ್ ನ ಜಿಲ್ಲಾ ಚೇರ್ ಪರ್ಸನ್ ಮಂಜುನಾಥ ಹನುಮರೆಡ್ಡಿ, ಸುಧಾ ಹನುಮರಡ್ಡಿ, ಶಾಲೆಯ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಆರ್.ಎಸ್. ಹನ್ನಿ, ಕಾರ್ಯದರ್ಶಿ ಶಿವಕುಮಾರಗೌಡ ಬಿ.ಜಿ., ವೀರೇಶ ಪಾಟೀಲ ಉಪಸ್ಥಿತರಿದ್ದರು.
ಶಿಕ್ಷಕರಾದ ಕುಸುಮಾ ಅಳವಂಡಿ ಕಾರ್ಯಕ್ರಮ ನಿರೂಪಿಸಿದರು. ನವಿಲಾ ಬೆಲ್ಲದ ಸ್ವಾಗತಿಸಿದರು. ನೀಲಮ್ಮ ನರಗುಂದ ವಂದಿಸಿದರು.