

ಹುಬ್ಬಳ್ಳಿ: ಇಲ್ಲಿಯ ರುದ್ರಾಕ್ಷಿ ಮಠದಲ್ಲಿ ಶ್ರೀನಿಜಗುಣ ಶಿವಯೋಗಿಗಳ ಜಯಂತಿ ಉತ್ಸವದ ಅಂಗವಾಗಿ ಬುಧವಾರ ಉಚಿತ ವೈದ್ಯಕಿಯ ಹಾಗೂ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ಆಯುರ್ವೇದ ಆಸ್ಪತ್ರೆಯ ಡಾ. ಸಿದ್ದನಗೌಡ ಪಾಟೀಲ ಅವರ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಜಯಪ್ರಿಯ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರಿಂದ ಕಣ್ಣಿನ ತಪಾಸಣೆ ನಡೆಯಿತು. ಡಾ. ಕಿಶೋರ ಬಾಗಲಕೋಟೆ ಅವರು ದಂತ ತಪಾಸಣೆ ಮಾಡಿದರು.
ರಾಷ್ಟ್ರೊತ್ಥಾನ ರಕ್ತ ನಿಧಿ ಕೇಂದ್ರದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಅನೇಕ ಯುವಕರು ಹಾಗೂ ಮಹಿಳೆಯರು ರಕ್ತದಾನ ಮಾಡಿದರು. ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶ್ರೀ ಚನ್ನಮಲ್ಲ ಸ್ವಾಮೀಜಿ, ಶ್ರೀ ಸದಾನಂದ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ದತ್ತಮೂರ್ತಿ ಕುಲಕರ್ಣಿ, ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಮಹಾಂತೇಶ ಗಿರಿಮಠ, ಮಲ್ಲಿಕಾರ್ಜುನ ಶಿರುಗುಪ್ಪಿ, ಶಂಭು ಲಕ್ಷ್ಮೇಶ್ವರಮಠ, ಪ್ರವಿಣ ಬೆಲ್ಲದ, ಪ್ರಭು ಹುಕ್ಕೇರಿಮಠ, ಸಿದ್ದು ಮಠದ ಮುಂತಾದವರು ಭಾಗವಹಿಸಿದ್ದರು.
ಆದರ್ಶ ಕಾಲೇಜಿನ ನಿರ್ದೇಶಕ ಬಿ.ಸಿ. ಗೌಡರ ಇವರನ್ನು ಸನ್ಮಾನಿಸಲಾಯಿತು.
ಉಪನ್ಯಾಸ: ಶ್ರೀಮಠದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ಉಪನ್ಯಾಸ ಏರ್ಪಡಿಸಲಾಗಿತ್ತು. ಜನಪದ ಸೊಗಡು ಕುರಿತು ಇನ್ಸಪೆಕ್ಟರ್ ಡಾ. ಜ್ಯೋತಿರ್ಲಿಂಗ ಹೊನಕಟ್ಟಿ ಉಪನ್ಯಾಸ ನೀಡಿದರು. ಅನೇಕ ಜನಪದ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಯುವಕರಿಗೆ ಮೊಬೈಲ್ ಬಿಡಿಸಿ ನಮ್ಮ ಸಂಸತಿಯತ್ತ ತರಬೇಕು. ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಪ್ರಾರಂಭಿಸಬೇಕು ಎಂದರು. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕೆ.ಎಸ್. ಕೌಜಲಗಿ, ವಿಶ್ವನಾಥ ಹಿರೇಗೌಡರ, ವಿದ್ಯಾ ವಂಟಮುರಿ, ಸುನಿಲ್ ಪತ್ರಿ, ಅನುಸೂಯ ಪಾಟೀಲ್, ಸದಾಶಿವ ಚೌಶೆಟ್ಟಿ ಮುಂತಾದವರು ಭಾಗವಹಿಸಿದ್ದರು.