ಆರೋಗ್ಯ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ನಗರದ ಸಂಜೀವಿನಿ ಆಯುರ್ವೇದ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ಮದ್ಯ ಸೇವನೆಯಿಂದಾಗುವ ಯಕೃತ್ ರೋಗಗಳಿಗೆ (ಆಲ್ಕೋಹಾಲ್ ಲೀವರ್ ಡಿಸಾರ್ಡರ್) ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಸಲಹೆ ಶಿಬಿರವನ್ನು ಮಾ. 15ರಂದು ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.

ತಜ್ಞ ವೈದ್ಯರಾದ ಡಾ. ಚರಂತಯ್ಯ ಹಿರೇಮಠ, ಡಾ. ಅಶೋಕ ಬಿಂಗಿ, ಡಾ. ಅಂಜನಾ ಸಿದ್ದಾಪುರ, ಡಾ. ಸೌಭಾಗ್ಯ ಬಿ. ಅವರು ತಪಾಸಣೆ ನಡೆಸುವರು.
ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಚರಂತಯ್ಯ ಹಿರೇಮಠ ಕೋರಿದ್ದಾರೆ. ಶಿಬಿರವು ಪ್ರತಿ ಶನಿವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಡೆಯಲಿದೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net