

ವಿಜಯವಾಣಿ ಸುದ್ದಿಜಾಲ ಗದಗ
ಎಲ್ಲರೂ ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು. ವಿಶೇಷವಾಗಿ ಯ ರೋಗ ಬರದಂತೆ ಅವಶ್ಯಕ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಡಾ.ವೀರೇಶ ಹಂಚಿನಾಳ ಹೇಳಿದರು.
ತಾಲೂಕಿನ ಹೊಂಬಳ ಗ್ರಾಮದ ಪಿಯು ಕಾಲೇಜ್ದಲ್ಲಿ ಶುಕ್ರವಾರ ಎರ್ಪಡಿಸಿದ್ದ ಆರೋಗ್ಯ ಜಾಗೃತಿ ಅಭಿಯಾನ ಮತ್ತು ಯ ರೋಗ ನಿಮೂರ್ಲನೆಯಲ್ಲಿ ವಿದ್ಯಾಥಿರ್ಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಅವಸರ, ಒತ್ತಡದ ಜೀವನ ನಡೆಸುತ್ತಿದ್ದೇವೆ. ಜೀವನದಲ್ಲಿ ಸಮಾಧಾನ, ನೆಮ್ಮದಿ ಎಂಬುದೇ ಇಲ್ಲ. ಹೀಗಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ನಿಯಮಿತ ಆಹಾರ ಸೇವನೆ, ವಿಶ್ರಾಂತಿ, ಲು ವ್ಯಾಯಾಮ, ವಾಯು ವಿಹಾರ, ಯೋಗ, ಧ್ಯಾನ ಹೀಗೆ ಮುಂತಾದ ಹವ್ಯಾಸಗಳನ್ನು ರೂಢೀಸಿಕೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯ ರಮೇಶ ಶಿಗ್ಲಿ ಮಾತನಾಡಿ, ಕ್ಲಬ್ ನ ಕಾರ್ಯ ಚಟುವಟಿಕೆಗಳನ್ನು ಗ್ರಾಮಿಣ ಭಾಗದಲ್ಲೂ ನಡೆಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆ ಹೊಂಬಳ ಗ್ರಾಮದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಸಾವಿತ್ರಿ ಶಿಗ್ಲಿ, ಪ್ರವಿಣ ವಾರಕರ, ರಾಜು ಮಲ್ಲಾಡದ, ಅಮೃತಾ ವಾರಕರ, ಸುರೇಖಾ ಮಲ್ಲಾಡದ, ದತ್ತು ಬೇವಿನಕಟ್ಟಿ, ಅನೀಲ ಕುಷ್ಟಗಿ, ವೀಣಾ ಸುಲಾಖೆ, ಪೂಜಾ ಪಾಟೀಲ ಸೇರಿದಂತೆ ಹಲವರು ಇದ್ದರು.