ಆರೋಗ್ಯ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಅಮೃತ ಟಾಕೀಸ್ ಬಳಿಯ ಅಶೋಕಾ ಮಲ್ಟಿಸ್ಪೆಷಾಲಿಟಿ ಹಾಗೂ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜ. 4ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಬಿಪಿ, ಶುಗರ್, ಹೃದಯರೋಗ, ಎಲುಬು ಕೀಲು ಜೋಡಣೆ ಮತ್ತು ನೇತ್ರ ತಪಾಸಣೆ ನಡೆಸಲಾಗುವುದು.

ತಜ್ಞ ವೈದ್ಯರಾದ ಡಾ. ಅಶೋಕ ಬಂಗಾರಶೆಟ್ಟರ, ಡಾ. ಯೋಗೀಶ್ವರ ಎ.ವಿ., ಡಾ. ಸೃಷ್ಟಿ ವಾಳದ, ಡಾ. ವರ್ಷಾ ಬಂಗಾರಶೆಟ್ಟರ ತಪಾಸಣೆ ನಡೆಸುವರು. ಆಸಕ್ತರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net