ಶಿಕ್ಷಕರಿಗೆ ವೈದ್ಯಕಿಯ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಕೋಯಿನ್ ರಸ್ತೆಯಲ್ಲಿರುವ ಕೆಎಲ್ಇ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಸಮಾಜ ಕಲ್ಯಾಣ ಮತ್ತು ರೋಟರಿ ಕಮ್ಯುನಿಟಿ ಕಾರ್ಪ್ಸ್ ನ ಬ್ಲೂ ಏಂಜಲ್ಸ್ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಸಹಯೋಗದಲ್ಲಿ ಶಿಕ್ಷಕರು ಮತ್ತು ಅವರ ಕುಟುಂಬಗಳ ಪ್ರಯೋಜನಕ್ಕಾಗಿ ಉಚಿತ ವೈದ್ಯಕಿಯ ತಪಾಸಣೆ ಶಿಬಿರವನ್ನು ಫೆ. 23ರಂದು ಬೆಳಗ್ಗೆ 9ಕ್ಕೆ ಆಯೋಜಿಸಲಾಗಿದೆ.

ಕ್ಯಾನ್ಸರ್ ಪತ್ತೆ ಪರೀಕ್ಷೆ, ಥೈರಾಯ್ಡ್, ಸಕ್ಕರೆ, ಹಿಮೋಗ್ಲೋಬಿನ್, ಕಣ್ಣಿನ ತಪಾಸಣೆ, ದಂತ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಗುವುದು.
ಶಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದು ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಅಧ್ಯಕ್ಷ ದಿನೇಶ ಶೆಟ್ಟಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net