ಹಿರಿಯರ ಆರೋಗ್ಯ ತಪಾಸಣೆ

Published on

ಹುಬ್ಬಳ್ಳಿ: ಇಲ್ಲಿಯ ನವನಗರ ಕರ್ನಾಟಕ ಸರ್ಕಲ್ ಬಳಿ ಕೆಎಚ್ ಬಿ ಕಾಲನಿಯ ಶ್ರೀ ವೀರಭದ್ರ ಚಾರಿಟಬಲ್ ಟ್ರಸ್ಟ್‌ನ ನೆಮ್ಮದಿ ಹಿರಿಯ ನಾಗರಿಕರ ಯೋಗಕ್ಷೇಮ ಕೇಂದ್ರದ ಆವರಣದಲ್ಲಿ ನ್ಯೂ ಸ್ಟಾರ್ ಚಾರಿಟಬಲ್ ಟ್ರಸ್ಟ್ ಹಾಗೂ ಜಯಪ್ರಿಯಾ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಅ. 23ರಂದು ಬೆಳಗ್ಗೆ 10.30ಕ್ಕೆ ಹಿರಿಯರು ಹಾಗೂ ಅಂಗವಿಕಲರಿಗಾಗಿ ನೇತ್ರ ಹಾಗೂ ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ.

ಹಿರಿಯ ತಜ್ಞ ವೈದ್ಯರು ಶಿಬಿರ ನಡೆಸಿಕೊಡಲಿದ್ದು, ಹಿರಿಯರು ಆರೋಗ್ಯಕ್ಕೆ ಸಂಬಂಧಿಸಿದ ಸಮಾಲೋಚನೆ ಕೂಡ ಮಾಡಬಹುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಡಾ. ಈರಪ್ಪ ಬಿಳಿಜಾಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net