ಪ್ರಕೃತಿ ಚಿಕಿತ್ಸೆ ಶಿಬಿರ 20ರಂದು

Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಡಾ. ಕೆ.ಎಸ್. ಶರ್ಮಾ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಸಂಸ್ಥೆಯಲ್ಲಿ ಅ. 20ರಂದು ಮಧ್ಯಾಹ್ನ 12ಕ್ಕೆ ಉಚಿತ ಪ್ರಕೃತಿ ಚಿಕಿತ್ಸೆ ಸಲಹಾ ಶಿಬಿರ ಏರ್ಪಡಿಸಲಾಗಿದೆ.

ತಜ್ಞರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ನಂತರ ಆರೋಗ್ಯ ಸಮಸ್ಯೆಗಳಿಗೆ ಉಚಿತ ಸಲಹೆ ನೀಡಲಾಗುವುದು.

ಮಧುಮೇಹ, ಕ್ರಾನಿಕ್ ಅಸ್ತಮಾ, ಸಂಧಿವಾತ, ಬೊಜ್ಜುತನ, ಪಾರ್ಶ್ವವಾಯು, ಚರ್ಮರೋಗ, ಕಿಡ್ನಿ ಸ್ಟೋನ್ ಅಥವಾ ಯಾವುದೇ ರೋಗ ಪೀಡಿತರು ಸಲಹೆ ಪಡೆಯಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಡಾ. ಕೆ.ಎಸ್. ಶರ್ಮಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net