ಪರೀಕ ಸೌಖ್ಯವನದಲ್ಲಿ ನವಚೇತನ ಆರೋಗ್ಯ ಶಿಬಿರ

New Project (11)
Published on

ಬೆಳ್ತಂಗಡಿ: ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ನವಚೇತನ ಆರೋಗ್ಯ ಶಿಬಿರ ನಡೆಯಿತು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಉದ್ಘಾಟಿಸಿದರು. ಆದರ್ಶ ಆಸ್ಪತ್ರೆಯ ಹದಯ ರೋಗ ತಜ್ಞ ಡಾ.ಶ್ರೀಕಾಂತ್ ಕೆ., ಸಂಸ್ಥೆಯ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ್ ಪೂಜಾರಿ ಶುಭಹಾರೈಸಿದರು.

ಡಾ.ಶ್ರೀಕಾಂತ್ ಕೆ. ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಬುಡೋಕಾನ್ ಕರಾಟೆ ನಿರ್ದೇಶಕ ಶಿಹಾಮ್ ಸಂತೋಷ್ ಶೆಟ್ಟಿ, ಯುವ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ ಫಿಟ್‌ನೆಸ್ ಟ್ರೈನರ್ ಉಮೇಶ್ ಮಟ್ಟು, ಕೊರಿಯೋಗ್ರಾಫರ್ ಮಂಜಿತ್ ಶೆಟ್ಟಿ ಉಪಸ್ಥಿತರಿದ್ದರು. ಆಸ್ಪತ್ರೆಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪೊಲೀಸ್ ಕ್ಷೇಮಾಭಿವೃದ್ಧಿ ಅಧಿಕಾರಿ ರೋಹಿತ್ ನಾಯಕ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net