24ರಂದು ನವಲಗುಂದದಲ್ಲಿ ಆರೋಗ್ಯ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಸ್ವಾಮಿ ಮಠದ ಸಂಯುಕ್ತಾಶ್ರಯದಲ್ಲಿ ನ. 24ರಂದು ಮಠದ ಆವರಣದ ಶ್ರೀ ನಾಗಲಿಂಗ ಭವನದಲ್ಲಿ "ಉಚಿತ ಆರೋಗ್ಯ ತಪಾಸಣಾ ಶಿಬಿರ' ಏರ್ಪಡಿಸಲಾಗಿದೆ.

ನವಲಗುಂದದ ಶ್ರೀ ಹಾದಿ ಬಸವೇಶ್ವರ ಸೇವಾ ಸಮಿತಿಯ ಸಹಕಾರದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರ ನಡೆಯಲಿದ್ದು, ಮಠದ ಗುರುಗಳಾದ ಶ್ರೀ ವೀರೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ.

ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ನುರಿತ ವೈದ್ಯರು ತಪಾಸಣೆ ಮಾಡಲಿದ್ದು, ಎಲುಬು ಸಾಂಧ್ರತೆ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು. ಆಸಕ್ತರು ಪ್ರಯೋಜನ ಪಡೆಯಬೇಕೆಂದು ಕೋರಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net