

ಹುಬ್ಬಳ್ಳಿ: ಇಲ್ಲಿಯ ಹಿರೇಪೇಟೆ ಭೂಸ್ಪೇಟೆ ಹಾಗೂ ಕಂಜಗಾರ ಓಣಿ ಶ್ರೀಗಣೇಶ ಉತ್ಸವ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಬೃಹತ್ ಶಿಬಿರ ಏರ್ಪಡಿಸಲಾಗಿತ್ತು.
350ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇಸಿಜಿ, ಇಕೋ, ರಕ್ತ ತಪಾಸಣೆ, ಕಣ್ಣಿನ ತಪಾಸಣೆ, ಇತರ ಎಲ್ಲ ತಪಾಸಣೆಗಳನ್ನು ಉಚಿತವಾಗಿ ಮಾಡಿ ಔಷಧ ನೀಡಲಾಯಿತು.
ಡಾ. ಮಹೇಶ ನಾಲವಾಡ, ಡಾ. ಎಸ್.ಎ. ಪಾಟೀಲ, ಡಾ. ಪ್ರಥಮೇಶ, ಡಾ. ದೀಪಕ ಜಿತೂರಿ, ಡಾ. ಮಾಳಗಿ, ಡಾ. ಮಹೇಶ ನೀಲಕಂಠನವರ, ಇತರ ವೈದ್ಯರು ನೇತೃತ್ವ ವಹಿಸಿದ್ದರು.
ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಶಿರಗುಪ್ಪಿ, ಶಂಭು ಲಕ್ಷ್ಮೇಶ್ವರಮಠ, ಧರ್ಮರಾಜ ಚಿಕ್ಕಣ್ಣವರ್, ವಿನಾಯಕ ಕಾಳೇಕರ್, ಸತೀಶ್ ಗುತ್ತಲ್, ಸಿದ್ದು ಮಠದ, ರಮೇಶ ಬೆಂದ್ರೆ ಉಪಸ್ಥಿತರಿದ್ದರು.