ಆರೋಗ್ಯ ತಪಾಸಣೆ ಚಿಕಿತ್ಸೆ ಶಿಬಿರ

IMG_20250731_162219_871.jpg
Published on

ಹುಬ್ಬಳ್ಳಿ: ಇಲ್ಲಿಯ ಲಿಂಗರಾಜನಗರ ಶೆಟ್ಟರ್ ಲೇಔಟ್ ನಲ್ಲಿರುವ ಗ್ಲೋಬಲ್ ಕಾಲೇಜಿನಲ್ಲಿ
ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನ, ಶ್ರೇಯಾ ಜನಸೇವಾ ಫೌಂಡೇಷನ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 2ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಶ್ರೇಯಾ ಜನಸೇವಾ ಫೌಂಡೇಷನ್ ಅಧ್ಯಕ್ಷ ವಿ.ಜಿ. ಪಾಟೀಲ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು, ಸ್ತ್ರೀರೋಗ, ನೇತ್ರ, ಇಎನ್ ಟಿ, ದಂತ, ಎಲುಬು ಕೀಲು, ಹರ್ನಿಯಾ, ಹೃದಯರೋಗ ಸೇರಿ ವಿವಿಧ ತಪಾಸಣೆಗಳನ್ನು ಶಿಬಿರದಲ್ಲಿ ಕೈಗೊಂಡು ಅಗತ್ಯ ಇರುವವರಿಗೆ ಚಿಕಿತ್ಸೆ ನೀಡಲಾಗುವುದು ಎಂದರು.

ಗ್ಲೋಬಲ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪುಷ್ಪಾ ಹಿರೇಮಠ ಮಾತನಾಡಿ, ಹುಬ್ಬಳ್ಳಿ ಆಯುರ್ವೇದ ಆಸ್ಪತ್ರೆ, ಎಸ್ ಡಿಎಂ ನಾರಾಯಣ ಹೃದಯಾಲಯ, ಜಯಪ್ರಿಯಾ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಶಿಬಿರದಲ್ಲಿ ಸರ್ವ ಕಾಯಿಲೆಗಳ ಆರೋಗ್ಯ ತಪಾಸಣೆ ಅಲ್ಲದೇ ಉಚಿತ ಔಷಧ ವಿತರಣೆ ಮಾಡಲಾಗುವುದು.

ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಶಾಸಕ ಮಹೇಶ ಟೆಂಗಿನಕಾಯಿ, ಮೊದಲಾದವರು ಭಾಗವಹಿಸುವರು. ಪ್ರತಿಷ್ಠಾನದ ವತಿಯಿಂದ ವಿ.ಜಿ. ಪಾಟೀಲ್ ಅವರಿಗೆ ವಿಶ್ವಮಾನ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹಿರೇಮಠ ತಿಳಿಸಿದರು.

ಫೌಂಡೇಷನ್ ಸಂಸ್ಥಾಪಕ ಡಾ. ಶಾಂತಣ್ಣ ಕಡಿವಾಲ, ಪ್ರೊ. ಸುನೀಲ್, ಡಾ. ತ್ಯಾಗರಾಜ, ಡಾ. ಮಹೇಶ ದೇಶಪಾಂಡೆ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net