

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಜಗದ್ಗುರು ಗಂಗಾಧರ ಸ್ವಾಮೀಜಿ ಮೂರುಸಾವಿರ ಮಠ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಹುಬ್ಬಳ್ಳಿ ಕೋ- ಆಪರೇಟಿವ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಅಂಚಟಗೇರಿ ಗ್ರಾಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಶಿಬಿರ ಉದ್ಘಾಟಿಸಿದರು.
ಪ್ರಾಂಶುಪಾಲ ಡಾ. ಎಂ.ಜಿ. ಹಿರೇಮಠ, ಅಂಚಟಗೇರಿ ಗ್ರಾಪಂ ಅಧ್ಯಕ್ಷ ಮಂಜುನಾಥ, ರಾಮಪ್ಪ ಬಡಿಗೇರ, ಬಸವರಾಜ ಗಬ್ಬೂರ್, ಡಾ. ವೈ.ಎಫ್. ಹಂಜಿ ಇತರರು ಉಪಸ್ಥಿತರಿದ್ದರು.