ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್ ಕಿವಿಮಾತು

1 (2)
Published on

ಮಂಡ್ಯ: ಇಲ್ಲಿನ ವಿದ್ಯಾನಗರದ ಅನ್ನದಾತೆ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಿಳೆಯರಿಗೆ ಮಡಿಲಕ್ಕಿ ತುಂಬುವ ಕಾರ್ಯಕ್ರಮ, ದೇವಿಯ ಮೆರವಣಿಗೆ ಆಯೋಜಿಸಲಾಗಿತ್ತು.

ಅಂಎಯೇ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ್, ಮನುಷ್ಯ ಸಾಧನೆ ಮಾಡಲು ಆಯುಷ್ಯ, ಆರೋಗ್ಯ, ಅವಕಾಶ ಅತ್ಯಾವಶ್ಯಕ. ಇರುವ ಆಯುಷ್ಯದಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಬಾಳುವುದು ನಮ್ಮ ಕೈಯಲ್ಲಿದೆ. ನಿರ್ಲಕ್ಷೃ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ನುಡಿದರು.

ವೃದ್ಯಾಪ್ಯದಲ್ಲಿ ಆರೋಗ್ಯವಾಗಿರಬೇಕಾದರೆ ಯವ್ವನದಲ್ಲಿ ಶಿಸ್ತುಬದ್ಧ ಜೀವನವನ್ನು ನಡೆಸಬೇಕು. ಆರೋಗ್ಯವನ್ನು ಕಾಪಾಡಿಕೊಂಡಿರಬೇಕು. ಇಂತಹ ಸಂದೇಶವನ್ನು ನಮ್ಮ ಹಿರಿಯರು ಹೇಳುತ್ತಿದ್ದರು, ನನಗೆ ಈಗ 73 ವರ್ಷವಾಗಿದ್ದು, ಗಂಟೆಗಟ್ಟಲೆ ನಿಂತು ಮಾತನಾಡಿಲಿಕ್ಕೆ ಸಾಧ್ಯವಿದೆ. ಹಿರಿಯರಿಂದ ಬಂದ ಷುಗರ್ ಬಿಟ್ಟರೆ ನಮ್ಮ ಆರೋಗ್ಯ ಚೆನ್ನಾಗಿದೆ ಎಂದು ಕಿವಿಮಾತೇಳಿದರು.

ಅನ್ನಪೂರ್ಣೇಶ್ವರಿ ದೇವಸ್ಥಾನದ ಪೀಠಾಧ್ಯಕ್ಷ ಶಾಂತಕುಮಾರ್ ಸ್ವಾಮೀಜಿ, ನಗರಸಭಾ ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ವೈದ್ಯ ಡಾ.ಚಂದ್ರಶೇಖರ್, ವಕೀಲ ಎಂ.ಗುರುಪ್ರಸಾದ್ ಇತರರಿದ್ದರು. ತಾರಾ ಡಯೋಗ್ನೋಸ್ಟಿಕ್ ಸೆಂಟರ್ ವತಿಯಿಂದ ಆರೋಗ್ಯ ತಪಾಸಣೆ, ಡಾ.ಅಪ್ಪಾಜಿ ಸ್ಮಾರಕ ದಂತ ಆಸ್ಪತ್ರೆಯಿಂದ ದಂತ ತಪಾಸಣೆ, ತಾರಾ ಕಣ್ಣಿನ ಆಸ್ಪತ್ರೆಯಿಂದ ನೇತ್ರ ತಪಾಸಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net