

ಗದಗ: ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಗ್ರಾಮ ಪಂಚಾಯತ ಯಲಿಶಿರೂರ, ಪ್ರಾಥಮಿಕ ಆರೋಗ್ಯಕೇಂದ್ರ ಹರ್ತಿ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಉಪಕೇಂದ್ರ ಯಲಿಶಿರೂಂಜ, ಸ್ಕೈಲ್ ಫೌಂಡೇಶನ್ ಗದಗ, ಹುಬ್ಬಳ್ಳಿಯ ಜಯಪ್ರಿಯ ಕಣ್ಣಿನ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಆಯುಷ್ಮಾನ್‍ಭವ ಆರೋಗ್ಯ ಶಿಬಿರ ಮೇಳವನ್ನು ಯಲಿಶಿರೂರ ಸಮುದಾಯ ಭವನದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ತಪಾಸಣಾ ಶಿಬಿರವನ್ನು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ್, ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಅವರು ಶಿಬಿರದ ಕುರಿತು ಆಯುಷ್ಮಾನ್ ಭವ ಆರೋಗ್ಯ ಶಿಬಿರವು ಜನರ ಮನೆಯ ಬಾಗಿಲಿನಲ್ಲಿ ಆರೋಗ್ಯದ ವಿವಿಧ ಸೇವೆಗಳಾದ ಸಾಂಕ್ರ್ರಾಮಿಕ ರೋಗಗಳ ತಪಾಸಣೆ. ಹೃದಯಸಂಬಂಧಿ ಕಾಯಿಲೆ, ಮಧುಮೇಹ ಕಾಯಿಲೆ, ರಕ್ತ ಹೀನತೆ, ಕ್ಯಾನ್ಸರ್ ಕಾಯಿಲೆಗಳ ತಪಾಸಣೆ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು. ಇಂದಿನ ದಿನಮಾನಗಳಲ್ಲಿ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ ಮಧುಮೇಹ, ಕ್ಯಾನ್ಸರ್ ರೋಗಗಳು ಅಧಿಕವಾಗಿ ಕಂಡುಬರುತ್ತದೆ ಈ ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ರೋಗದಿಂದಾಗುವ ಸಮಸ್ಯೆಗಳನ್ನು ತಡೆಯಬಹುದು ಮತ್ತು 30 ವರ್ಷ ಮೇಲ್ಪಟ್ಟ ಎಲ್ಲ ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆಗಳನ್ನು ವರ್ಷಕ್ಕೆ ಒಮ್ಮೆಯಾದರು ಮಾಡಿಸಿಕೊಳ್ಳಬೇಕು ಮತ್ತು ಇಂದಿನ ಆಹಾರ ಪದ್ದತಿಜೀವನ ಶೈಲಿ ಸುಧಾರಿಸಿಕೊಳ್ಳಬೇಕು, ತಂಬಾಕು ಸೇವನೆ ಇತರೆ ಮಾದಕ ವಸ್ತುಗಳಿಂದ ದೂರ ವಿರುವದರಕುರಿತುಜನರಿಗೆಆರೋಗ್ಯ ಶಿಕ್ಷಣವನ್ನು ನೀಡಿ ಮಕ್ಕಳ ಆÀರೋಗ್ಯತಪಾಸಣೆಯನ್ನು ಶಿಬಿರದಲ್ಲಿ ನಡೆಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀಮತಿ ಜೋತ್ಸನಾ ಮಾತನಾಡಿ ಆರೋಗ್ಯದ ಕುರಿತು ಎಚ್ಚರಿಕೆ ಮತು ಎಲ್ಲಾ ಪೂರಕ ಉತ್ತಮ ಆಹಾರ ಸೇವನೆ ಮಾಡಬೇಕು ಎಂದರು.
ಶಿಬಿರದಲಿ 80 ಜನರ ರಕ್ತದೂತ್ತಡ ಹಾಗೂ ಮಧುಮೇಹ ತಪಾಸಣೆ, 40 ಜನರ ಕಣ್ಣಿನ ತಪಾಸಣೆ ಮಾಡಿಅವರಲ್ಲಿ 15 ಜನರಿಗೆ ಕಾಟ್ರ್ಯಾಕ್ಟ ಶಸ್ತ್ರಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು, 45 ಮಕ್ಕಳ ತಪಾಸಣೆ, 8 ಗರ್ಭಿಣಿಯರತಪಾಸಣೆ ಮಾಡಿ ಸ್ಕಾನಿಂಗ್ ಮಾಡಲಾಯಿತು, 4 ಈ.ಸಿ.ಜಿ ಹಾಗೂ 23 ಜನಟೆಲಿ ಕನ್‍ಸಲ್ಟೇಷನ್ ಮಾಡಲಾಯಿತು.
ಸಮುದಾಯ ಆರೋಗ್ಯ ಅಧಿಕಾರಿ ಕು. ನತಾಶಾ ಪಿಸಿ ರವರು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಪರಶುರಾಮ ಹೂಗಾರ, ಮಂಜುನಾಥ ಭಜಂತ್ರಿ, ಶ್ರೀಮತಿ ಕವಿತಾ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಿಬ್ಬಂದಿಗಳಾದ ಶ್ರೀಮತಿ ರೇಣುಕಾ, ಶ್ರೀಮತಿ ಶಾಂತ, ಶ್ರೀಮತಿ ಅಕ್ಕಮ್ಮ ಹಾಗೂ ಶ್ರೀಮತಿ ಸುಧಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಂಚಾಯಿತಿಯ ಸಿಬ್ಬಂದಿಗಳು ಗ್ರಾಮಸ್ಥರು ಭಾಗವಹಿಸಿದ್ದರು.