

ಹುಬ್ಬಳ್ಳಿ: ನಗರದ ಡಾ. ಆರ್.ಬಿ. ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸ್ವಾಭಿಮಾನ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಮದ್ಯಪಾನ ಮತ್ತು ಇತರ ವ್ಯಸನ ನಿವಾರಣೆಯ ಕುರಿತು ಜಾಗೃತಿ ಶಿಬಿರವನ್ನು ಚಾಮುಂಡೇಶ್ವರಿ ನಗರದಲ್ಲಿ ಏರ್ಪಡಿಸಲಾಗಿತ್ತು.
ಸಾಮೂಹಿಕವಾಗಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಶಿಬಿರವನ್ನು ಉದ್ಘಾಟಿಸಲಾಯಿತು.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಡಾ. ಸುಧೀಂದ್ರ ಹುದ್ದಾರ ಮತ್ತು ತುರ್ತು ಔಷಧ ತಜ್ಞೆ ಡಾ. ಸೋನಾಲಿ ಪಾಟೀಲ ಯಾವಗಲ್ ಅವರು, ಮಾದಕ ವ್ಯಸನಗಳ ಬಗೆ, ಅವುಗಳಿಂದ ಮುಕ್ತರಾಗುವ ವಿಧಾನಗಳ ಕುರಿತು ತಿಳಿವಳಿಕೆ ಮೂಡಿಸಿದರು.
ಡಾ. ಆರ್.ಬಿ. ಪಾಟೀಲ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಬಿ.ಆರ್. ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಅನಿತಾ ಬಿ. ಪಾಟೀಲ ಅವರು ನೇತೃತ್ವ ವಹಿಸಿದ್ದರು.
ಅಶೋಕನಗರ ಠಾಣೆಯ ಇನ್ಸಪೆಕ್ಟರ್ ಸುದರ್ಶನ, ಮಂಜುನಾಥ, ಮುಖಂಡರಾದ ಸಿದ್ದು ಮೊಗಲಿಶೆಟ್ಟರ್, ಲಕ್ಷ್ಮಣ ಬಕ್ಕಾಯ, ಡಾ. ಸಿ. ತ್ಯಾಗರಾಜ್, ಡಾ. ಚವ್ಹಾಣ, ಗುರುಮೂತಿರ್ ಬೆಂಗಳೂರು, ಗೋವಿಂದ ಬೆಲ್ಡೋಣಿ ಪಾಲ್ಗೊಂಡಿದ್ದರು.
ಸ್ವಾಭಿಮಾನ ಫೌಂಡೇಷನ್ ಅಧ್ಯಕ್ಷ ಮಂಜುನಾಥ ಕೊಂಡಪಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಚಿನ್ನಾರಿ ಕಾರ್ಯಕ್ರಮ ನಿರೂಪಿಸಿದರು. ಚಾಮುಂಡೇಶ್ವರಿ ಕಲ್ಯಾಣ ಸೇವಾ ಸಂಘದ ಅಧ್ಯಕ್ಷ ಪರಶುರಾಮ ಮಲ್ಯಾಳ ವಂದಿಸಿದರು.