ನೇಕಾರ ಸಮಾಜದಿಂದ ಆರೋಗ್ಯ ತಪಾಸಣೆ

IMG-20230829-WA0015.jpg
Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪಟ್ಟಸಾಲಿ (ನೇಕಾರ) ಸಮಾಜ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಹಾಗೂ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಇಲ್ಲಿಯ ಗೋಕುಲ ರಸ್ತೆ ಸಮಾಜದ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಎಂ.ಎಂ. ಜೋಶಿ ಆಸ್ಪತ್ರೆ ವೈದ್ಯರು, ಡಾ. ಎಂ.ಜೆ. ಜೀವಣ್ಣವರ, ಡಾ. ಪ್ರಕಾಶ ಬೀರನೂರ, ಡಾ. ಸುಮಂಗಲಾ ಬೀರನೂರ, ಡಾ. ರಾಜಣ್ಣ ಜೀವಣ್ಣವರ, ಡಾ. ಪ್ರಕಾಶ ನಿಡವಣಿ, ಡಾ. ಮಂಜುಳಾ ನಿಡವಣಿ, ಡಾ. ವೀರಗಂಗಾಧರ ನಿಟಾಲಿ, ಡಾ. ಶಂಕರ ಯಾದವಾಡ ಅವರು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿ ತಪಾಸಣೆ ನಡೆಸಿ ಸಲಹೆ ನೀಡಿದರು.

ಕ್ಲಬ್‌ನ ಸುರೇಶ ಚಿಂದಿ, ಅಮರೇಶ ನೂಲ್ವಿ, ಡಾ. ನಾಗರಾಜ ಶೆಟ್ಟಿ, ಪ್ರಕಾಶ ಇರಕಲ್ಲ, ವೀರಣ್ಣ, ಅಶೋಕ ಹರ್ತಿ, ಮಾಲಾ ಪಾಗಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net