

ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಕಳಸಾಪೂರ ಗ್ರಾಪಂನಲ್ಲಿ ಶುಕ್ರವಾರ ಗರ್ಭೀಣಿಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು. ಬಸವಕೇಂದ್ರ ಅಧ್ಯಕ್ಷ ಮಲ್ಲಿಕಾರ್ಜುನ ಕಂಡಮ್ಮನ್ನವರ ಬಸವಣ್ಣನವರ ವಚನಸಾರುವ ಭಿತ್ತಿ ಪತ್ರಗಳನ್ನು ಅನಾವರಣಗೊಳಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಗರ್ಭೀಣಿ ಮಹಿಳೆಯರ ರಕ್ತದೊತ್ತಡ, ಮಧುಮೇಹ, ಥೈರಾಯಡ್ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸಲಾಯಿತು.
ಮುಖ್ಯ ಆರೋಗ್ಯ ಅಧಿಕಾರಿ ಸ್ಯಾಮುಲ್ ಕರಡಿಗುಡ್ಡ ಮಾತನಾಡಿ, ಗರ್ಭೀಣಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಒತ್ತುಕೊಟ್ಟು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸೂಕ್ತ ಸಮಯದಲ್ಲಿ ವೈದ್ಯರನ್ನು ಕಾಣಬೇಕೆಂದು ಸಲಹೆ ನೀಡಿದರು.
ಕಳಸಾಪೂರ ಬಸವಕೇಂದ್ರದ ಕಾರ್ಯಾಧ್ಯ ಮಲ್ಲಿಕಾರ್ಜುನ ಖಂಡಮ್ಮನವರ ಮಾತನಾಡಿ, ಸೂಕ್ತ ಸಮಯದಲ್ಲಿ ಹಂತ ಹಂತವಾಗಿ ತಮ್ಮ ಆರೋಗ್ಯದ ಬಗ್ಗೆ ಗರ್ಭೀಣಿಯರು ವೈಧ್ಯಾಕಾರಿಗಳನ್ನು ಸಂಪಕಿರ್ಸುವುದು ಸೂಕ್ತ ಎಂದರು.
ಭಾಗ್ಯಶ್ರೀ ಹಳ್ಳಿಕೇರಿ, ರಮೇಶ ಕಟ್ಟೆಣ್ಣವರ, ರತ್ನಾ ಲಮಾಣಿ, ಲಲಿತಾ ತಳವಾರ, ಪಾರ್ವತಿ ಹೂಗಾರ, ಸಂಗೀತಾ ಲಮಾಣಿ, ಜ್ಯೋತಿ ಕಮ್ಮಾರ ಸೇರಿದಂತೆ ಇತರರು ಇದ್ದರು.