ಆರೋಗ್ಯ ತಪಾಸಣೆ ಶಿಬಿರ ನಾಳೆ

Health Care
Published on

 ತಿ.ನರಸೀಪುರ : ಮೈಸೂರಿನ ರಾಷ್ಟ್ರಭಾರತಿ ಚಾರಿಟಬಲ್ ಟ್ರಸ್ಟ್ ಹಾಗೂ ಆರೋಗ್ಯ ಭಾರತಿ ವತಿಯಿಂದ ಪಟ್ಟಣದ ಆಲಗೂಡು ಮಾರಮ್ಮ ದೇವಸ್ಥಾನ ಆವರಣದಲ್ಲಿ ಜ.5ರಂದು ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆಯಲಿರುವ ಈ ಉಚಿತ ಶಿಬಿರದಲ್ಲಿ ನಾರಾಯಣ ಆಸ್ಪತ್ರೆ ವತಿಯಿಂದ ರಕ್ತದೊತ್ತಡ, ಇಸಿಜಿ, ಪಿಎಂಐ ಪರೀಕ್ಷೆಗಳು, ವೈದ್ಯರೊಂದಿಗೆ ಸಮಾಲೋಚನೆ ಯೋಜನೆಗೊಂಡಿದೆ. ತಜ್ಞ ಡಾ. ಚಂದ್ರಶೇಖರ ತಂಡದ ನುರಿತ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಿಸಲಿದ್ದಾರೆ. ಇದೇ ಸಂದರ್ಭ ಪ್ರಾಣಿಕ್ ಹೀಲಿಂಗ್, ಯೋಗ, ಡಾ. ಶ್ರೀವತ್ಸ ತಂಡದವರಿಂದ ಕಣ್ಣಿನ ತಪಾಸಣೆಯೂ ನಡೆಯಲಿದೆ. ಮಾಹಿತಿಗೆ ಮೊಬೈಲ್ ಸಂಖ್ಯೆ: 95387 38792 ಅಥವಾ 9986378773 ಸಂಪರ್ಕಿಸಬಹುದು ಎಂದು ರಾಷ್ಟ್ರಭಾರತಿ ಚಾರಿಟಬಲ್ ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net