22ರಂದು ಮಧುಮೇಹ ಚಿಕಿತ್ಸೆ ಶಿಬಿರ

IMG_20240919_112510_125.jpg
Published on

ಹುಬ್ಬಳ್ಳಿ: ನಗರದ ಇದಾರಾ ಎ ಖಿದ್ಮತ ಎ ಖಲ್ಕ್ ಸಂಸ್ಥೆಯ ಆಶ್ರಯದಲ್ಲಿ ಮಧುಮೇಹ ಕಾಯಿಲೆಗೆ ಉಚಿತ ಚಿಕಿತ್ಸೆ ಶಿಬಿರವನ್ನು ಸೆ. 22ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಕೇಶ್ವಾಪುರ ಶಾಂತಿನಗರದ ಗುಲ್ ಮೊಹರ್ ಅಪಾರ್ಟಮೆಂಟ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಹ್ಮದ್ ರಜಾಕ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಗುರು ಪೀರ್ ಸೈಯದ್ ಅಹ್ಮದ್ ರಜಾ ಸರಖಾಜಿ ಕುಟುಂಬದವರು ತಲೆತಲಾಂತರಗಳಿಂದ ಸಕ್ಕರೆ ಕಾಯಿಲೆಗೆ ಔಷಧಿ ನೀಡುತ್ತ ಬಂದಿದ್ದಾರೆ. ಈಗಾಗಲೇ ಲಾಂತರ ಜನರು ಔಷಧಿಯಿಂದ ಗುಣಮುಖರಾಗಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಜನರಿಗಾಗಿ ಇದೀಗ ಉಚಿತ ಔಷಧಿ ನೀಡುತ್ತಿದ್ದಾರೆ ಎಂದರು.

2003ರಲ್ಲಿ ಸ್ಥಾಪಿತವಾದ ಇದಾರ ಎ ಖಿದ್ಮತ ಎ ಖಲ್ಕ್ ಸಂಸ್ಥೆಯು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದೆ. ಈ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಂಸ್ಥೆಯ ನಯೀಮುದ್ದೀನ್, ಇರ್ಷಾದ್ ಇತರರು ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net