ಆರೋಗ್ಯ ತಪಾಸಣೆ ಶಿಬಿರ 20ರಂದು

Published on

ಹುಬ್ಬಳ್ಳಿ: ಸಮೃದ್ಧಿ ಚಾರಿಟಬಲ್ ಟ್ರಸ್ಟ್ ಹಾಗೂ ಕೆಎಲ್ಇ ಸುಚಿರಾಯ ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜ. 20ರಂದು ಬೆಳಗ್ಗೆ 10ಕ್ಕೆ ಇಲ್ಲಿಯ ಕಾರವಾರ ರಸ್ತೆ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿ ಹೈಸ್ಕೂಲ್ನಲ್ಲಿ ಆಯೋಜಿಸಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಶಿಬಿರ ಉದ್ಘಾಟಿಸುವರು. ಶಾಸಕ ಪ್ರಸಾದ ಅಬ್ಬಯ್ಯ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಎಂ. ವಿಜಯಕುಮಾರ, ಬಿಇಒ ಚನ್ನಪ್ಪಗೌಡ, ಗುರುದೇವ ಎಜ್ಯುಕೇಶನ್ ಸೊಸೈಟಿ ಅಧ್ಯ ಎಸ್.ಡಿ. ಮಧುಕರ ಅತಿಥಿಗಳಾಗಿ ಪಾಲ್ಗೊಳ್ಳುವರು.

ಟ್ರಸ್ಟ್ ಅಧ್ಯ ಜಿ.ಎಲ್. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸುವರು. ತಜ್ಞ ವೈದ್ಯರು ಎಲುಬು ಸಾಂಧ್ರತೆ, ಸಕ್ಕರೆ ಕಾಯಿಲೆ, ಹೃದ್ರೋಗ, ನರರೋಗ, ರಕ್ತದೊತ್ತಡ, ಕಣ್ಣಿನ ತಪಾಸಣೆ ನಡೆಸುವರು. ಆಹಾರ ಪದ್ಧತಿ ಮತ್ತು ತೂಕ ಇಳಿಸುವ ಬಗ್ಗೆ ತಿಳಿವಳಿಕೆ ನೀಡಲಾಗುವುದು.

ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕೆಂದು ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net