ಗರ್ಭಾವಸ್ಥೆಯಲ್ಲಿ ಆರೋಗ್ಯ ಜಾಗೃತಿ ಅಗತ್ಯ

CLK ANGANAVADI 12
Published on

ಚಳ್ಳಕೆರೆ: ಗರ್ಭಾವಸ್ಥೆಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಆರೋಗ್ಯವಂತ ಮಕ್ಕಳ ಜನನ ಸಾಧ್ಯ ಎಂದು ಅಂಗನವಾಡಿ ಇಲಾಖೆ ಮೇಲ್ವಿಚಾರಕಿ ಟಿ. ಸುಮಿತ್ರಾ ಹೇಳಿದರು.
ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಸಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಪಂ ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯವಂತ ಸಮಾಜಕ್ಕೆ ಮಹಿಳೆಯರ ಜಾಗೃತಿ ಅಗತ್ಯವಿದೆ. ಗರ್ಭಿಣಿ ಸಮಯದಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸಬೇಕು. ಅಂಗನವಾಡಿಯಿಂದ ನೀಡುವ ಪೌಷ್ಟಿಕ ಆಹಾರಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಕಾಲಕ್ಕೆ ಸರಿಯಾಗಿ ವೈದ್ಯರ ಸಲಹೆ ಮತ್ತು ಗುಣಮಟ್ಟದ ಆಹಾರ ಬಳಕೆಯಲ್ಲಿ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಾದ ಎಚ್.ದುರುಗಮ್ಮ, ಎಸ್. ಗಗನ, ಬಿ. ಸುವರ್ಣಮ್ಮ, ಲಕ್ಷ್ಮೀದೇವಿ, ಎಚ್.ಜಿ. ಮಂಜುಳಾದೇವಿ, ಎನ್. ಸವಿತಾ, ನಾಗವೇಣಿ, ಮೀನಕ್ಕ, ದಾಕ್ಷಾಯಿಣಮ್ಮ, ಓ. ನೇತ್ರಾವತಿ, ರಾಧಾ, ಸಂಧ್ಯಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net