

ನರಗುಂದ: ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ಸಾರ್ವಜನಿಕರು ಆರೋಗ್ಯದ ಬಗ್ಗೆ ಸದಾ ಜಾಗೃತರಾಗಿರಬೇಕು ಎಂದು ಡಾ. ಎ.ಐ. ಹುಯಿಲಗೋಳ ಹೇಳಿದರು.
ವೈದ್ಯರ ದಿನಾಚರಣೆ ಆಂಗವಾಗಿ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೈವಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಎಸ್.ಬಿ. ಭೂಮಣ್ಣವರ ಮಾತನಾಡಿ, ವೈದ್ಯರೆಂದರೆ ಪರಮಾತ್ಮನ ಸಮಾನ ಎನ್ನುತ್ತಾರೆ. ವೈದ್ಯರು ಆರೋಗ್ಯ ಬಗ್ಗೆ ಎಲ್ಲರಿಗೂ ವಿಶೇಷ ಜಾಗೃತಿ, ತಿಳಿವಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ ಎಂದರು.
ಡಾ. ಎಫ್.ಕೆ. ಸವದತ್ತಿ ಮಾತನಾಡಿ, ವೈದ್ಯರು ಸಾರ್ವಜನಿಕರ ಸೇವೆಗೆ ನಿರಂತರ ಶ್ರಮಿವಹಿಸುತ್ತಾರೆ. ಆದರೆ, ತಮ್ಮ ನಿಜ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ರೋಗ ನಿವಾರಣೆಗೆ ಶ್ರಮಿಸುತ್ತಿರುವ ವೈದ್ಯರು ಸಮಯ ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಈಶ್ವರೀಯ ವಿದ್ಯಾಲಯದ ನಿರ್ಮಲಕ್ಕ, ಪ್ರಭಕ್ಕ ಮಾತನಾಡಿದರು. ಡಾ. ಎಸ್.ಎಫ್. ಸವದತ್ತಿ, ಡಾ. ಸಿ.ಎಸ್. ಅಸೂಟಿ, ಡಾ. ಪ್ರವೀಣ ಮೇಟಿ, ಡಾ. ಜೆ.ಜಿ. ಭದ್ರಗೌಡ್ರ, ಡಾ. ಎಸ್.ಕೆ. ಪತ್ತೇಪೂರ, ಡಾ. ಸಿ.ಕೆ. ರಾಚನಗೌಡ್ರ, ಡಾ. ಎಸ್.ವಿ. ಪಾಟೀಲ, ಡಾ. ಶಿವಲೀಲಾ ಪಾಟೀಲ, ಡಾ. ಜಿ.ಎಸ್. ನುಗ್ಗಾನಟ್ಟಿ, ಡಾ. ಮೆಹಬೂಬ ಅಡ್ಲಿ ಜಮಾದಾರ, ಡಾ. ನವೀನ ಶಿರಂಸಗಿ, ಡಾ. ವೀರನಗೌಡ್ರ ಇತರರಿದ್ದರು.