ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ

IMG-20250312-WA0119
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತು.
Published on

ಹೊಳೆನರಸೀಪುರ: ಯೂಟ್ಯೂಬ್, ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯದ ಬಗ್ಗೆ ಮಾಹಿತಿಗಳು ಲಭ್ಯವಿದ್ದರೂ ಆರೋಗ್ಯ ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಗ್ರಾಮೀಣ ಜನರಿಗೆ ವ್ಯಾಪಕ ಪ್ರಚಾರ ಮಾಡಲು ಬೀದಿ ನಾಟಕ ಉತ್ತಮ ಮಾಧ್ಯಮ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್.ರಾಜೇಶ್ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬುಧವಾರ 2024-25ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಇಲಾಖೆಯಲ್ಲಿ ಸಿಗುವ ಎಲ್ಲ ಸವಲತ್ತು, ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿಯಂತ್ರಣ, ತಾಯಿ ಮತ್ತು ಮಗುವಿನ ಮರಣವನ್ನು ತಡೆಗಟ್ಟುವಿಕೆ, ಚುಚ್ಚುಮದ್ದುಗಳ ಕುರಿತು ಜನರಿಗೆ ಮನಮುಟ್ಟುವಂತೆ ಜಾನಪದ ಕಲಾತಂಡಗಳ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು. ಜಾಥಾ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಲ್ಲಿ ಏಡ್ಸ್, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ಬೇಸಿಗೆಯಲ್ಲಿ ಬರುವಂತಹ ಕಾಯಿಲೆಗಳು ಹಾಗೂ ಸೇವೆಗಳನ್ನು ಒಳಗೊಂಡ ಹಲವಾರು ವಿಷಯಗಳ ಬಗ್ಗೆ ಜಾಾನಪದ ಕಲಾತಂಡಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ವಿವರಿಸಿದರು.

ಕಲಾತಂಡದ ಮುಖ್ಯಸ್ಥ ಎಂ.ಎಲ್.ಲೋಕೇಶ, ಕ್ಷಯರೋಗ ಮೇಲ್ವಿಚಾರಕ ರಮೇಶ್, ಲಕ್ಷ್ಮೇಗೌಡ, ಸೋಮು ಆರೋಗ್ಯ ಸಹಾಯಕರಾದ ಸ್ವಾಮಿ, ಕಲಾವಿದರಾದ ಪರಮೇಶ, ಜನಕನಾಯಕ, ದಿಲೀಪ್, ಚೈತ್ರಾ, ಪಲ್ಲವಿ, ಕೇಶವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net