ಆರೋಗ್ಯಕರ ವಾತಾವರಣ ಸೃಷ್ಟಿಸಿ

21 gvt 05
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಚಿಕ್ಕರಾಂಪುರದ ಪರಿಸರ ಕೃಷಿ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡ ಪರಿಸರ ಸ್ವಚ್ಛತೆ ಜಾಗೃತಿ ಅಭಿಯಾನದಲ್ಲಿ ಮಕ್ಕಳ ತಜ್ಞ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿದರು. ಸಂಸ್ಥೆ ಪದಾಧಿಕಾರಿಗಳು, ವ್ಯಾಪಾರಸ್ಥರು ಮತ್ತು ಭಕ್ತರು ಇದ್ದರು.
Published on

ಗಂಗಾವತಿ: ತಾಲೂಕಿನ ಅಂಜನಾದ್ರಿ ಬೆಟ್ಟದ ವ್ಯಾಪ್ತಿಯಲ್ಲಿ ಚಿಕ್ಕರಾಂಪುರದ ಪರಿಸರ ಕೃಷಿ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸೇವಾ ಸಂಸ್ಥೆಯಿಂದ ಪರಿಸರ ಸ್ವಚ್ಛತೆ ಜಾಗೃತಿ ಅಭಿಯಾನ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಭಕ್ತರು ಮತ್ತು ವ್ಯಾಪಾರಸ್ಥರೊಂದಿಗೆ ಅಭಿಯಾನ ನಡೆಸಿದ ಸಂಸ್ಥೆ ಕಾರ್ಯಕರ್ತರು, ಪ್ಲಾಸ್ಟಿಕ್ ಮುಕ್ತ ಅಂಜನಾದ್ರಿ ಬೆಟ್ಟಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಅಭಿಯಾನಕ್ಕೆ ಚಾಲನೆ ನೀಡಿದ ಮಕ್ಕಳ ತಜ್ಞ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿ, ಖ್ಯಾತ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದ್ದು, ಆರೋಗ್ಯಕರ ವಾತಾವರಣ ಸೃಷ್ಟಿಸಬೇಕು. ಪ್ಲ್ಯಾಸ್ಟಿಕ್ ಪ್ರೇರಿತ ವಸ್ತುಗಳ ಬಳಕೆ ನಿಷೇಧಿಸಿ, ಜಾಗೃತಿ ಮೂಡಿಸಬೇಕು.

ಧಾರ್ಮಿಕ ಸಂಸ್ಕೃತಿ ಅಳವಡಿಸಿಕೊಳ್ಳಬೇಕು. ದೇವಾಲಯದಲ್ಲಿ ವಸ ಸಂಹಿತೆ ಜಾರಿಗೊಳಿಸುವುದು ಸೂಕ್ತ ಎಂದರು. ಸಂಸ್ಥೆ ಪದಾಧಿಕಾರಿಗಳು, ವ್ಯಾಪಾರಸ್ಥರು ಮತ್ತು ಭಕ್ತರು ಇದ್ದರು. ನಂತರ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net