ಆರೋಗ್ಯ, ಶಿಕ್ಷಣ ದೇಶದ ಪ್ರಗತಿಗೆ ಮುನ್ನುಡಿ

IMG-20250129-WA0133
ಅರಸೀಕೆರೆ ಗ್ರಾಮಾಂತರ ತಾಲೂಕಿನ ದೂಡ್ಡಮೇಟಿ ಕುರ್ಕೆ ಗ್ರಾಮದ ಅರವಿಂದ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರವನ್ನು ಶ್ರೀ ಶಶಿಶೇಖರ ಸಿದ್ದಬಸವಸ್ವಾಮೀಜಿ ಉದ್ಘಾಟಿಸಿದರು. ತೇಜೇಶ್ವರ ಸ್ವಾಮೀಜಿ, ಮೋಹನ್ ಕುಮಾರ್, ಕೆವಿನ್ ಶಿವು, ಶಿವಕುಮಾರ, ವಿವೇಕ್ ಇತರರು ಹಾಜರಿದ್ದರು.
Published on

ಅರಸೀಕೆರೆ ಗ್ರಾಮಾಂತರ : ತಾಲೂಕಿನ ಕಣಕಟ್ಟೆ ಹೋಬಳಿಯ ಡಿಎಂ ಕುರ್ಕೆ ಬೂದಿಹಾಳ್ ವಿರಕ್ತ ಮಠ ಶಾಂತವೀರ ಸ್ವಾಮಿ ವಿದ್ಯಾಸಂಸ್ಥೆಯ ಅರವಿಂದ ಇಂಗ್ಲಿಷ್ ಶಾಲೆಯಲ್ಲಿ ಅರವಿಂದ ವೈಭವ 25 ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ನಮ್ಮೆಲ್ಲರ ಹಾಗೂ ದೇಶದ ಪ್ರಗತಿಗೆ ಮುನ್ನುಡಿ ಬರೆಯುತ್ತದೆ. ಹಾಗಾಗಿ ಇವೆರಡರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸುವುದು ಸೂಕ್ತ. ಮೌಲ್ಯವರ್ದಿತ ಹಾಗೂ ವೈಚಾರಿಕ ಶಿಕ್ಷಣ ನೀಡುತತಿರುವ ಮಠದ ಸೇವೆ ಶ್ಲಾಘನೀಯ. ಇದೇ ರೀತಿಯಲ್ಲಿ ಎಲ್ಲ ವಿದ್ಯಾಸಂಸ್ಥೆಗಳು ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಕಲೆ ಇರುತ್ತದೆ. ಅದನ್ನು ಹೊರತರುವುದು ಪಾಲಕರು ಹಾಗೂ ಶಿಕ್ಷಕರ ಕರ್ತವ್ಯ. ಓದಿನ ವಿಷಯದಲ್ಲಿ ಪಾಲಕರು ಮಕ್ಕಳ ಮೇಲೆ ಒತ್ತಡ ತರಬಬಾರದು. ನಮ್ಮ ಶಿಕ್ಷಕರ ಸಹಕಾರದಿಂದ ದೊಡ್ಡಮಟ್ಟದ ವಿದ್ಯಾರ್ಥಿ ಸಮೂಹ ನಮ್ಮಲ್ಲಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಾಲಕರ ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ವಕೀಲ ವಿವೇಕ್, ವರ್ತಕ ಕೆ.ವಿ.ಎನ್. ಶಿವು, ಡಾ.ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net