ಲಯನ್ಸ್‌ನಿಂದ ಉಚಿತ ವೈದ್ಯಕೀಯ ಸವಲತ್ತು : ವೆಂಕಟೇಶ ಹೆಬ್ಬಾರ್ ಮೆಚ್ಚುಗೆ

lions
Published on

ಮೂಲ್ಕಿ: ಗ್ರಾಮೀಣ ಪ್ರದೇಶದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನಗರದ ವೈದ್ಯಕೀಯ ಸವಲತ್ತುಗಳನ್ನು ಲಯನ್ಸ್ ಉಚಿತವಾಗಿ ನೀಡುತ್ತಿದೆ ಎಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ ಹೆಬ್ಬಾರ್ ಹೇಳಿದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್, ಲಿಯೋ ಕ್ಲಬ್ ಯೆನ್ ಇನ್ಸ್‌ಫಯರ್, ಹರಿಹರ ಭಜನಾ ಮಂಡಳಿ ಪುತ್ತೂರು, ಮಹಾಲಿಂಗೇಶ್ವರ ಗೆಳೆಯರ ಬಳಗ, ವಿಸಿಸಿ ಕ್ರಿಕೆಟ್ ಕ್ಲಬ್ ಕರ್ನಿರೆ, ಧೂಮಾವತಿ ದೈವಸ್ಥಾನ ನಡಿಬೆಟ್ಟು, ಆಡಳಿತ ಮಂಡಳಿ ಅಂಬಾಭವಾನಿ ಭಜನಾ ಮಂದಿರ ಕವತ್ತಾರು, ಜೋಗಿದೊಟ್ಟು ಯುವಕ ವೃಂದ ಕವತ್ತಾರು ಸಂಯುಕ್ತ ಆಶ್ರಯದಲ್ಲಿ ಎ.ಜೆ.ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಹಾಗೂ ಎ.ಬಿ.ಶೆಟ್ಟಿ ಮೆಮೋರಿಯಲ್ ಡೆಂಟಲ್ ಸೈನ್ಸ್ ಇದರ ಸಹಯೋಗದೊಂದಿಗೆ ನಡೆದ ಬೃಹತ್ ಆರೋಗ್ಯ ಶಿಬಿರ ಹಾಗೂ ಉಚಿತ ದಂತ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.

ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಉಪಾಧ್ಯಕ್ಷ ಪುಷ್ಪರಾಜ್ ಚೌಟ ಶಿಬಿರ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್‌ಫಯರ್ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ ಎಂದರು.

ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಕೋಶಾಧಿಕಾರಿ ಅನಿಲ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಸುಧೀರ್ ಎನ್.ಬಾಳಿಗ, ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನದಾಸ್ ಶೆಟ್ಟಿ, ಅಶೋಕ ಭಂಡಾರಿ, ಪಾಂಡುರಂಗ ಕಾಮತ್, ರಾಮದಾಸ್ ಶೆಟ್ಟಿ, ದಯಾನಂದ ರಾವ್, ಹರೀಶ್ ಶೆಟ್ಟಿ, ಪ್ರೀತಮ್ ರೈ, ಎ.ಜೆ ಶೆಟ್ಟಿ ಆಸ್ಪತ್ರೆಯ ಡಾ.ಆಕಾಂಕ್ಷ ಶೆಟ್ಟಿ, ಎ.ಬಿ ಶೆಟ್ಟಿ ದಂತ ವೈದ್ಯಕೀಯ ಆಸ್ಪತ್ರೆಯ ಡಾ. ಶೋಭಿತ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net