

ಯಲಬುರ್ಗಾ: ಕಿವುಡುತನ ಮತ್ತು ಸ್ಪಷ್ಟ ಉಚ್ಛಾರಣೆ ದೋಷ ಹೊಂದಿದವರಿಗೆ ಉಚಿತ ತಪಾಸಣೆ ನಡೆಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಯಿರಿ ಎಂದು ಕಿಮ್ಸ್‌ನ ಕಿವಿ, ಮೂಗು ಹಾಗೂ ಗಂಟಲು ತಜ್ಞ ಅವಿನಾಶ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರವಣದೋಷ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ಜನರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಆರೋಗ್ಯ ಇಲಾಖೆ ಮೂಲಕ ಹಲವಾರು ಯೋಜನೆ ಜಾರಿಗೊಳಿಸಿದೆ. ಶ್ರವಣದೋಷ ಶಾಶ್ವತ ನಿವಾರಣೆಗೆ ಕ್ರಮಕೈಗೊಂಡಿದೆ. ಮನುಷ್ಯ ಆರೋಗ್ಯ ಕಡೆ ಗಮನಹರಿಸಿದಗಲೇ ರೋಗ ಮುಕ್ತವಾಗಿಸಲು ಸಾಧ್ಯ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಚ್.ರವೀಂದ್ರನಾಥ, ಆಡಿಯೋಲೊಜಿಸ್ಟ್ ಡಾ.ಬಿಂದು, ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಮೇಶ, ಡಾ.ದಯಾನಂದಸ್ವಾಮಿ, ಆಯುಷ ವೈದ್ಯಾಧಿಕಾರಿ ಟಿ.ಜೆ.ಘಾಟಗೆ, ಡಾ.ರವಿ ಕಟ್ಟಿಮನಿ ಇತರರಿದ್ದರು.