

ಕುರುಗೋಡು: ಅಪೌಷ್ಟಿಕ ಆಹಾರ ಸೇವನೆಯಿಂದ ರೋಗಗಳು ಮನುಷ್ಯನ ದೇಹ ಸೇರುತ್ತಿವೆ. ಹೀಗಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಆಡಳಿತ ವೈದ್ಯಾಧಿಕಾರಿ ಲಕ್ಷ್ಮಣ್ ನಾಯಕ್ ಹೇಳಿದರು.
ತಾಲೂಕಿನ ಓರ್ವಾಯಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯಿಂದ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕುರಿತು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದೆ ವೇಳೆ ಗರ್ಭಿಣಿ ವೈದ್ಯಕೀಯ ತಪಾಸಣೆ, ರಕ್ತ ಹೀನತೆ, ಮಧುಮೇಹ, ರಕ್ತದೊತ್ತಡ, ಮೂತ್ರ ಪರೀಕ್ಷೆ, ಗಂಡಾಂತರ ಗರ್ಭಿಣಿಯರಿಗೆ ಆರೋಗ್ಯ ಶಿಕ್ಷಣ, ಪೌಷ್ಟಿಕ ಆಹಾರ ಸೇವನೆ, ಹೆರಿಗೆ ಮತ್ತು ಎದೆ ಹಾಲಿನ ಮಹತ್ವ, ವೈಯಕ್ತಿಕ ಸ್ವಚ್ಛತೆ, ನವಜಾತ ಶಿಶುವಿನ ಆರೈಕೆ ಬಗ್ಗೆ ಮಾಹಿತಿ ನೀಡಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ರಾಘವ ಶೆಟ್ಟಿ, ಪ್ರಯೋಗಶಾಲಾ ಮತ್ತು ತಂತ್ರಜ್ಞಾನ ಅಧಿಕಾರಿಗಳು ಪಾಲ್ಗೊಂಡಿದ್ದರು.