

ವಿಜಯವಾಣಿ ಸುದ್ದಿಜಾಲ ಗದಗ
ಈಡಿಸ್ ಸೊಳ್ಳೆಗಳು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಡೆಂಘಿ, ಚಿಕುಂಗುನ್ಯ ರೋಗವು ಹರಡುತ್ತದೆ. ಆದ್ದರಿಂದ ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಾರ್ವಾ ನಾಶಪಡಿಸುವುದರಿಂದ ರೋಗಗಳು ಹರಡದಂತೆ ತಡೆಗಟ್ಟಹುದು. ಸಮುದಾಯದೊಂದಿಗೆ ಸೇರಿ ಡೆಂಘಿ ಜ್ವರವನ್ನ ನಿಯಂತ್ರಿಸಬಹು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಲಿಂಗದಾಳ ಹೇಳಿದರು.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಹಯೋಗದಲ್ಲಿ ತಾಲೂಕಿನ ಅಡವಿಸೋಮಾಪೂರ ತಾಂಡೆಯಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಘಿ ನಿಯಂತ್ರಣ ದಿನಾಚರಣೆ ಜಾಥಾ ಕಾರ್ಯಕ್ರಮ ಮತ್ತು ಪರಿಸರ ಸ್ವಚ್ಛತೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೊಳ್ಳೆಗಳ ನಿಯಂತ್ರಣದಿಂದ ಡೆಂಘಿ, ಚಿಕುನಗುನ್ಯ ಮತ್ತು ಮಲೇರಿಯಾ ರೊಗಗಳನ್ನು ನಿಯಂತ್ರಣ ಮಾಡಲು ಸಾಧ್ಯ. ಸೋಳ್ಳಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಒಡಮಸ್ ಲೇಪನ, ಮನೆಯಲ್ಲಿ ಬೇವಿನ ಸೊಪ್ಪಿನ ದೂಮಿಕರಣ ಮಾಡುವುದು, ಸುತ್ತಮುತ್ತಲಿನ ಚರಂಡಿಯಲ್ಲಿ ನೀರುನಿಲ್ಲದಂತೆ ಸ್ವಚ್ಛಗೊಳಿಸುವುದು, ನಿಮ್ಮ ನೀರಿನ ಪರಿಕರಗಳಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದರು.
ಆರೋಗ್ಯ ನಿರೀಣಾಧಿಕಾರಿ ನಾಗರಾಜ ಜ್ಯೋಷಿ ಮಾತನಾಡಿ, ಸಾರ್ವಜನಿಕರು ನೀರಿನ ಪರಿಕರಗಳನ್ನು ಮುಚ್ಚಿಡಬೇಕು. ಜ್ವರ ಇದ್ದರೆ ರಕ್ತ ಪರೀೆ ಮಾಡಿಸಿಕೊಳ್ಳಬೇಕು. ಅತೀಸಾರ, ವಾಕರಿಕೆ, ವಾಂತಿ, ನಿರ್ಜಲೀಕರಣ ಮತ್ತು ಸ್ನಾಯು ಸೆಳೆತದಂತಹ ಸಮಸ್ಯೆಗಳು ಇದ್ದರೆ, ಕುದಿಸಿ, ಆರಿಸಿದ ನೀರನ್ನು ಕುಡಿಯುವುದು ಉತ್ತಮ. ಸಾರ್ವಜನಿಕರು ನೀರಿನ ಕೊಳಾಯಿ ಮತ್ತು ಸ್ಥಳವನ್ನು ಸ್ವಚ್ಛವಾಗಿ ಇಡಬೇಕು. ತಾಜಾ ಹಣ್ಣುಗಳು, ತರಕಾರಿಗಳನ್ನು ಮತ್ತು ಆಹಾರ ಪದಾರ್ಥಗಳನ್ನು ಉಪಯೋಗಿಸಬೇಕು ಎಂದು ಹೇಳಿದರು.
ಬಿ.ಸಿ. ಹಿರೇಹಾಳ, ಎಸ್. ಬಿ. ಗಡಾದ, ಸವಿತಾ ಪವಾರ, ಉಮಾದೇವಿ ಖಾನಾಪೂರ, ಮಂಜುಳಾ ಆರಿ, ಲಲಿತಾ ಅಂಗಡಿ ಇತರರು ಇದ್ದರು.