ಆರೋಗ್ಯ ಜಾಗೃತಿಗೆ ಶಿಬಿರ ಸಹಕಾರಿ

1
Published on

ಆಲೂರು : ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಅಡಗೂರಿನ ಯೋಗ ಚೇತನ ಕೇಂದ್ರದ ಮುಖ್ಯಸ್ಥ ಚೇತನ್ ತಿಳಿಸಿದರು.ಪಟ್ಟಣದ ಕೊನೇ ಪೇಟೆಯಲ್ಲಿ ಲಯನ್ಸ್ ಸೇವಾ ಸಂಸ್ಥೆ ಘಟಕ, ಮಾತೃಶ್ರೀ ಕ್ಲಿನಿಕ್ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಡಯಾಬಿಟಿಸ್, ಹೃದ್ರೋಗ ಮತ್ತು ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಅತೀ ಸುಖಮಯ ಜೀವನ ನಡೆಸುವವರಿಗೆ ಮಾತ್ರ ಎರಗುತ್ತವೆ. ಹಾಗಾಗಿ ನಿತ್ಯವೂ ದೈಹಿಕ ಚಟುವಟಿಕೆ ನಡೆಸುವುದು ಮುಖ್ಯ ಎಂದರು.
ಲಯನ್ಸ್ ಸೇವಾ ಸಂಸ್ಥೆ ಘಟಕದ ಅಧ್ಯಕ್ಷ ಎಚ್.ಜಿ. ಪ್ರವೀಣ್ ಮಾತನಾಡಿ, ರಕ್ತದಾನ ಎಂಬುವುದು ಇತರರ ಜೀವ ಉಳಿಸುವ ಸಂಜೀವಿನಿ ಎಂದರು. ಸೇವಾ ಕಾರ್ಯ ನಮ್ಮ ಬದುಕಿನ ಮೌಲ್ಯ ಹೆಚ್ಚಿಸುತ್ತವೆ. ಅಂತಹ ಕಾರ್ಯ ಮಾಡುವತ್ತ ಸಾಗೋಣ ಎಂದರು.
ಇದೇ ಸಂದರ್ಭ ಕೈ, ಕಾಲು, ಚರ್ಮ, ಪ್ರಸೂತಿ, ಡಯಾಬಿಟಿಕ್ ಸೇರಿದಂತೆ ವಿವಿಧ ಕಾಯಿಲೆಗಳ ತಜ್ಞರು ತಪಾಸಣೆ ನಡೆಸಿದರು. 500 ಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು. 85 ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ತಾಲೂಕು ಕರವೇ ಅಧ್ಯಕ್ಷ ಆರ್.ಎಸ್. ನಟರಾಜ್, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಆನಂದ, ಖಜಾಂಚಿ ರಾಮಚಂದ್ರ, ಮುಖಂಡರಾದ ರಘು ಪಾಳ್ಯ, ಪ್ರವೀಣ್, ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾಗವಹಿಸಿದ್ದರು.

31 ಪೋಟೋ ಕ್ಯಾಪ್ಶನ್: 1
ಆಲೂರಿನಲ್ಲಿ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಅಡಗೂರಿನ ಯೋಗ ಚೇತನ ಕೇಂದ್ರದ ಚೇತನ್, ಲಯನ್ಸ್ ಸಂಸ್ಥೆ ಅಧ್ಯಕ್ಷ ಪ್ರವೀಣ, ತಾಲೂಕು ಕರವೇ ಅಧ್ಯಕ್ಷ ನಟರಾಜ, ಮುಖಂಡರಾದ ಆನಂದ್, ರಘು ಪಾಳ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net