

ಬಂಟ್ವಾಳ: ಕರ್ನಾಟಕ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘ ಬೆಂಗಳೂರು ಇದರ ಬಂಟ್ವಾಳ ತಾಲೂಕು ಘಟಕದ ಪುನಃರಚನಾ ಸಭೆ ಶನಿವಾರ ಬಿ.ಸಿ.ರೋಡಿನ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಜರುಗಿತು.
ಹಾಲಿ ಅಧ್ಯಕ್ಷೆ ಪ್ರೇಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ.ಕ. ಜಿಲ್ಲಾಧ್ಯಕ್ಷ ನಿಂಗರಾಜು ಕೆ.ಪಿ. ನೂತನ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ತಾಲೂಕು ಘಟಕದ ನೂತನ ಗೌರವಾಧ್ಯಕ್ಷರಾಗಿ ಪ್ರೇಮ ಕೆ., ಅಧ್ಯಕ್ಷರಾಗಿ ಶಂಕರ್ ಪಿ., ಉಪಾಧ್ಯಕ್ಷರಾಗಿ ಚಂದ್ರಾವತಿ ಮತ್ತು ಉಮ್ಮರಗಿ ಶರಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಏರ್ಯ, ಸಹಕಾರ್ಯದರ್ಶಿಯಾಗಿ ನವೀನ ಕುಮಾರಿ ಮತ್ತು ವಿಶ್ವನಾಥ ಗೌಡ ಬಿ, ಖಜಾಂಚಿಯಾಗಿ ಪುಟ್ಟರಂಗನಾಥ ಟಿ., ಸಂಘಟನಾ ಕಾರ್ಯದರ್ಶಿಯಾಗಿ ವಿಜಯಲಕ್ಷ್ಮೀ ಮತ್ತು ರವಿಕುಮಾರ್, ನಿರ್ದೇಶಕರಾಗಿ ರೋಹಿಣಿ ಮತ್ತು ಭವಾನಿ ಆಯ್ಕೆಗೊಂಡರು.
ಸ್ಥಾಪಕ ಅಧ್ಯಕ್ಷ ನಾರಾಯಣ ಪೂಜಾರಿ, ನಿವೃತ್ತ ಶಿಕ್ಷಕ ಆನಂದ ಎಂ.ಮತ್ತು ಕಲ್ಲಡ್ಕ ಮಾದರಿ ಶಾಲೆಯ ಪದವೀಧರ ಮುಖ್ಯಶಿಕ್ಷಕ ಅಬೂಬಕ್ಕರ್ ಅಶ್ರಫ್ ಉಪಸ್ಥಿತರಿದ್ದರು. ತಾಲೂಕಿನ 50ಕ್ಕೂ ಮಿಕ್ಕಿ ಮುಖ್ಯಶಿಕ್ಷಕರು ಭಾಗವಹಿಸಿದ್ದರು. ಪುಟ್ಟರಂಗನಾಥ ಟಿ. ಸ್ವಾಗತಿಸಿದರು. ಪ್ರೇಮ ಕೆ.ಪ್ರಾಸ್ತಾವಿಕವಾಗಿ ಮಾತಾಡಿದರು. ಶಂಕರ್ ಪಿ.ವಂದಿಸಿದರು. ದಾಮೋದರ ಏರ್ಯ ನಿರೂಪಿಸಿದರು.