

ಧಾರವಾಡ: ಕರ್ತವ್ಯಕ್ಕೆ ಅನಽಕೃತ ಗೈರು ಮತ್ತು ರಜಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಪರ ಆಯುಕ್ತರ ಕಚೇರಿಯ ಕಂಪ್ಯೂಟರ್ ಅನಲಿಸ್ಟ್ ಹಾಗೂ ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯ ನಿಯೋಜಿತ ಮುಖ್ಯ ಶಿಕ್ಷಕಿ ಶಾಂತಾ ಮೀಶಿ ಅವರನ್ನು ಅಮಾನತು ಮಾಡಿ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಇತ್ತೀಚೆಗೆ ಆದೇಶ ಹೊರಡಿಸಿದ್ದಾರೆ.
ಶಾಂತಾ ಮೀಶಿ ಅವರನ್ನು ಸರ್ಕಾರದ ಆದೇಶದಂತೆ ಇಟಿಗಟ್ಟಿ ಸರ್ಕಾರಿ ಪ್ರೌಢಶಾಲೆಯ ನಿಯೋಜಿತ ಮುಖ್ಯ ಶಿಕ್ಷಕಿ ಹುದ್ದೆಗೆ ನಿಯೋಜಿಸಿದ ಪ್ರಯುಕ್ತ ಫೆ. ೨೯ರಂದು ಆಯುಕ್ತರ ಕಚೇರಿಯಿಂದ ಬಿಡುಗಡೆ ಮಾಡÀಲಾಗಿತ್ತು. ಆದರೆ, ಅವರು ಬಿಡುಗಡೆ ಆದೇಶವನ್ನು ಸ್ವೀಕರಿಸಿರಲಿಲ್ಲ. ಆದಾಗ್ಯೂ ಮಾ. ೧ ಮತ್ತು ೨ರಂದು ಕಚೇರಿಯ ವಹಿಯಲ್ಲಿ ಸಹಿ ಮಾಡಿದ್ದರು. ಮಾ. ೫ರಂದು ನಿಯೋಜಿತ ಹುದ್ದೆಗೆ ಹಾಜರಾಗಿದ್ದರು. ಆದರೆ, ಮಾ. ೬ರಿಂದ ೨೦ರವರೆಗೆ ಅರ್ಧ ವೇತನ ರಜೆ ಬಳಕೆ ಮಾಡಿರುವುದಾಗಿ ವರದಿ ಸಲ್ಲಿಸಿದ್ದರು. ದೀರ್ಘಾವಽ ರಜೆ ಪಡೆಯುವ ಮುನ್ನ ಕಚೇರಿ ಮುಖ್ಯಸ್ಥರ ಅನುಮತಿ ಪಡೆದು, ತಂತ್ರಾAಶದಲ್ಲಿ ರಜೆ ಅರ್ಜಿ ಸಲ್ಲಿಸಬೇಕು. ಮತ್ತೊಂದೆಡೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಽಕಾರಿ, ಸಿಬ್ಬಂದಿ ಪೂರ್ವಾನುಮತಿ ಇಲ್ಲದೆ ದೀರ್ಘಾವಽ ರಜೆ ಪಡೆಯುವಂತಿಲ್ಲ ಎಂದು ಚುನಾವಣಾಽಕಾರಿ ಆದೇಶವಿದೆ.
ಶಾಂತಾ ಮೀಶಿ ಅವರು ೧೫ ದಿನ ಶಾಲಾ ಕರ್ತವ್ಯಕ್ಕೆ ಅನಽಕೃತ ಗೈರಾಗಿದ್ದಾರೆ ಎಂದು ಉಪ ನಿರ್ದೇಶಕರು ಸಲ್ಲಿಸಿದ ವರದಿಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲ ಕಾರಣಗಳಿಂದ ಅವರನ್ನು ಅಮಾನತು ಮಾಡಿ ಅಪರ ಆಯುಕ್ತರು ಆದೇಶ ಹೊರಡಿಸಿದ್ದಾರೆ.