ಶಿರಹಟ್ಟಿಯಲ್ಲಿ ಸರಣಿ ಕಳ್ಳತನ

1010
Published on

ಕೊಕಟನೂರ: ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದೆ. 12 ಮನೆ, ಅಂಗಡಿಗಳ ಬಾಗಿಲು ಮುರಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳವು ಮಾಡಿದ್ದಾರೆ.

ಕಿರಣಕುಮಾರ ನಂದೇಶ್ವರ ಎಂಬುವರ ಮನೆಯ ತಿಜೋರಿ ಒಡೆದು 10 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿ, 70 ಸಾವಿರ ರೂ. ನಗದು, ರಾಮು ಗೋಪಾನೆ ಅವರ ಗಿರಣಿಯಲ್ಲಿದ್ದ 5 ಸಾವಿರ ರೂ. ನಗದು, ಕಾಳಪ್ಪ ಬಡಿಗೇರ ಮನೆಯಲ್ಲಿನ 10 ಗ್ರಾಂ ಬಂಗಾರ, 200 ಗ್ರಾಂ ಬೆಳ್ಳಿ, 10 ಸಾವಿರ ರೂ., ಅಶೋಕ ಉಪಾಧ್ಯಾಯ ಅವರ 10 ಸಾವಿರ ರೂ., ಮಲ್ಲಪ್ಪ ಮೀಶಿ ಅವರ 20 ಗ್ರಾಂ ಚಿನ್ನ ದೋಚಲಾಗಿದೆ.

ರಫೀಕ್ ಮುಲ್ಲಾ ಅವರ ಅಂಗಡಿಯಲ್ಲಿದ್ದ 6 ಸಾವಿರ ರೂ. ನಗದು, ಮೈರಾಜಬಿ ಮುಲ್ಲಾ ಅವರ 10 ಗ್ರಾಂ ಬಂಗಾರ, 100 ಗ್ರಾಂ ಬೆಳ್ಳಿ ಆಭರಣ ಕಳವಾಗಿದೆ. ಗೋಪಾಲ ಸನದಿ, ಈರಣ್ಣ ಬಡಿಗೇರ, ರಾವಸಾಬ ಸುಗ್ಗನವರ, ಸುವರ್ಣಾ ಹಳಿಂಗಳಿ, ಡಿ.ಜೋಶಿ ಅವರ ಮನೆ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಶಾಖೆಯ ಬಾಗಿಲು ಮುರಿದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಥಣಿ ಡಿವೈಎಸ್ಪಿ ಎಸ್.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಕ್ರೈಂ ಪಿಎಸ್‌ಐ ಎಂ.ಡಿ. ಘೋರಿ, ಬೆರಳಚ್ಚು ತಜ್ಞ ರಾಯಣ್ಣ ಒಂಟಗೋಡಿ, ಎಂ.ಬಿ. ಕಸವಣ್ಣವರ, ಎಂ.ಎಲ್. ಯಮಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net