

ಮಡಿಕೇರಿ:
ವಾಹನಗಳಲ್ಲಿ ಅಳವಡಿಸುವ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳೇ ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಭವಿಸುವ ಬಹುತೇಕ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರೂ ಕಣ್ಣು ಕೋರೈಸುವ ಹೆಡ್‌ಲೈಟ್‌ಗಳೊಂದಿಗೆ ಸಂಚರಿಸುವ ವಾಹನಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ದಂಡಾಸ್ತç ಪ್ರಯೋಗ ಮಾಡಲಾಗುತ್ತಿದೆ. ಕೊಡಗಿನಲ್ಲಿ ಕಳೆದ ವರ್ಷ ಈ ಸಂಬAಧ ಪೊಲೀಸರು 348 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 1.74 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಎದುರು ಬದಿಯಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತದೆ. ಹೆಚ್ಚು ರಸ್ತೆ ಅಪಘಾತಗಳು ಕೂಡ ಸಂಭವಿಸುತ್ತಿದೆ. ಭಾರಿ ಗಾತ್ರ ವಾಹನಗಳಾದ ಲಾರಿ, ಟ್ರಕ್, ಬಸ್ ಮುಂತಾದವುಗಳು ಹೆಚ್ಚು ಪ್ರಖರ ಬೆಳಕು ಹೊರಹಾಕುವ ಮತ್ತು ಕಣ್ಣು ಕುಕ್ಕುವ ಎಲ್‌ಇಡಿ ಲೈಟ್‌ಗಳನ್ನು ಅಳವಡಿಸುತ್ತಿರುವುದರಿಂದ ಇತರ ವಾಹನ ಚಾಲಕರುಗಳಿಗೆ ವಾಹನ ಚಲಾಯಿಸಲು ತೊಂದರೆಯಾಗುತ್ತ್ತಿದೆ.
ಬೈಕ್ ಅಥವಾ ಕಾರುಗಳಲ್ಲಿ ರಾತ್ರಿ ವೇಳೆ ಪ್ರಯಾಣ ಮಾಡುವ ಸಂದರ್ಭ ಎದುರಿನಿಂದ ಬರುವ ವಾಹನಗಳಲ್ಲಿ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳು ಇದ್ದರೆ ಸ್ವಲ್ಪ ಹೊತ್ತು ಎದುರಿನಲ್ಲಿ ಏನೂ ಕಾಣದಂಥ ಸ್ಥಿತಿ ನಿರ್ಮಾಣ ಆಗಿಬಿಡುತ್ತದೆ. ಈ ಅಲ್ಪ ಸಮಯದಲ್ಲೇ ಅಪಘಾತಗಳು ಮತ್ತು ಇದರಿಂದ ಆಗಬಹುದಾಗ ಸಾವು ನೋವು ನಡೆದು ಹೋಗಿಬಿಡುತ್ತದೆ. ಹಾಗಾಗಿಯೇ ರಸ್ತೆ ಅಪಘಾತಗಳು ಮತ್ತು ಅದರಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ ಅನುಮತಿಸಲಾದ ಲೈಟ್‌ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 138(5)ರ ಪ್ರಕಾರ ವಾಹನಗಳಲ್ಲಿ ಅಳವಡಿಸುವ ಹೆಡ್‌ಲೈಟ್‌ನ ಬೆಳಕು ಹೊರಸೂಸಬೇಕಾದ ಪ್ರಮಾಣವನ್ನು ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ. ಪಿ. 45 ಟಿ. ಕ್ಯಾಪ್ ಹೊಂದಿರುವ ಹಾಲೋಜಿನ್ ಬಲ್ಬ್ಗಳನ್ನು ಯಾವ ವಾಹನಗಳಲ್ಲೂ ಯಾವುದೇ ಕಾರಣಕ್ಕೂ ಹೆಡ್‌ಲೈಟ್‌ಗಳಲ್ಲಿ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ನಿಯಮದಲ್ಲಿ ಸೂಚಿಸಲಾಗಿದೆ. 24 ವೋಲ್ಟ್ ಸಿಸ್ಟಮ್‌ನ ಹೆಡ್‌ಲೈಟ್‌ಲ್ಲಿ ಹಾಲೋಜಿನ್ ಬಲ್ಬ್ಗಳು 70/75 ವ್ಯಾಟ್ಸ್ ಮೀರುವಂತಿಲ್ಲ. 12 ವೋಲ್ಟ್ ಹೆಡ್‌ಲೈಟ್ ಸಿಸ್ಟಮ್‌ನಲ್ಲಿ ಹಾಲೋಜಿನ್ ಬಲ್ಬ್ಗಳು 60/65 ವ್ಯಾಟ್ಸ್ ಮೀರಬಾರದು ಎಂದು ಕೇಂದ್ರ ಮೋಟಾರು ವಾಹನಗಳ ನಿಯಮಗಳಲ್ಲಿ ಹೇಳಲಾಗಿದೆ.
ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಒಮ್ಮೆ ಸಂಚರಿಸಿದರೆ ಸಾಕು ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಸೂಸುವ ಹೆಡ್‌ಲೈಟ್‌ಗಳನ್ನು ನೋಡಿದರೆ ಕೇಂದ್ರ ಮೋಟಾರು ವಾಹನಗಳ ನಿಯಮಗಳನ್ನು ಎಷ್ಟು ಚಾಲಕರು ಪಾಲಿಸುತ್ತಿದ್ದಾರೆ ಎನ್ನುವುದರ ಅರಿವಾಗುತ್ತದೆ. ಇಂಥ ಕಣ್ಣುಕೋರೈಸುವ ಹೆಡ್‌ಲೈಟ್‌ಗಳಿಂದಲೇ ರಾತ್ರಿ ವೇಳೆ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ ಎನ್ನುವುದರ ಅರಿವು ಇದ್ದರೂ ಪ್ರಕರಣ ಬೆಳಕಿನ ಹೆಡ್ ಲೈಟ್ ಬಳಕೆಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಹಾಗಾಗಿಯೇ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಮೋಟಾರು ವಾಹನ ಕಾಯಿದೆ 1998ರ ಕಲಂ 177ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಲಾಗುತ್ತಿದೆ.
ಪ್ರಖರ ಬೆಳಕು ಸೂಸುವ ಹೆಡ್‌ಲೈಟ್‌ಗಳ ಬಳಕೆಗೆ ಸಂಬAಧಿಸಿದAತೆ ಸಾರಿಗೆ ಇಲಾಖೆ ಮೂಲಕ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 10,004 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 48,16,700 ರೂ. ದಂಡ ವಿಧಿಸಲಾಗಿದೆ. ವಿಶೇಷ ಎಂದರೆ ಕೊಡಗಿನಲ್ಲಿ ಈ ಅವಧಿಯಲ್ಲಿ ಸಾರಿಗೆ ಇಲಾಖೆಗೆ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳೊಂದಿಗೆ ಸಂಚರಿಸುವ ಒಂದೇ ಒಂದು ವಾಹನ ಕಂಡು ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾಗಿ ಇಲ್ಲಿ ಸಾರಿಗೆ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಈ ಸಂಬAಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಇದೇ ವಿಷಯಕ್ಕೆ ಸಂಬAಧಿಸಿದAತೆ ಪೊಲೀಸ್ ಇಲಾಖೆಯಿಂದ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 44,556 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 2,23,78,050 ರೂ. ದಂಡ ವಿಧಿಸಲಾಗಿದೆ. ಕೊಡಗಿನಲ್ಲಿ 356 ಪ್ರಕರಣಗಳು ದಾಖಲಾಗಿದ್ದು, 1.78 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ರಾಜ್ಯದಲ್ಲಿ 2022ರಲ್ಲಿ 1,462 ಪ್ರಕರಣಗಳಿಂದ 7,37,500 ರೂ. ಮತ್ತು 2023ರಲ್ಲಿ 1,056 ಪ್ರಕರಣಗಳಿಂದ 5,33,250 ರೂ. ದಂಡ ವಸೂಲಿ ಆಗಿದ್ದರೆ ಕಳೆದ ವರ್ಷದಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ 2024ರಲ್ಲಿ ಬರೋಬ್ಬರಿ 42,038 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು ಒಂದೇ ವರ್ಷದಲ್ಲಿ 2,11,07,300 ರೂ. ದಂಡ ವಸೂಲಿ ಮಾಡಲಾಗಿದೆ.
ಪ್ರಖರ ಬೆಳಕು ಸೂಸುವ ಹೆಡ್‌ಲೈಟ್ ಬಳಕೆ ವಿರುದ್ಧ ಕೊಡಗಿನಲ್ಲೂ ಪೊಲೀಸರು ಕಳೆದ ವರ್ಷದಿಂದ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. 2024ರಲ್ಲಿ ಒಟ್ಟು 348 ಪ್ರಕರಣಗಳನ್ನು ದಾಖಲಿಸಿಕೊಂಡು 1.74 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಆದರೆ 2022ರಲ್ಲಿ 7 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು 3,500 ರೂ. ದಂಡ ಕಟ್ಟಿಸಿಕೊಂಡಿದ್ದರೆ, 2023ರಲ್ಲಿ ಕೇವಲ ಒಂದು ಪ್ರಕರಣ ದಾಖಲಿಸಿಕೊಂಡು 500 ರೂ. ದಂಡ ಕಟ್ಟಿಸಿಕೊಳ್ಳಲಾಗಿತ್ತು.
ಪೊಲೀಸ್ ಮತ್ತು ಸಾರಿಗೆ ಇಲಾಖೆ ವತಿಯಿಂದ ತಪಾಸಣಾ ಕಾರ್ಯ ನಡೆಸಿ ಅತಿ ಪ್ರಕಾಶವಿರುವ ದೀಪಗಳನ್ನು ಅಳವಡಿಸಿ ಸಂಚರಿಸವವರನ್ನು ಹಿಡಿದು ಪ್ರಕರಣ ದಾಖಲಿಸಿಕೊಂಡು ದಂಡ ಕಟ್ಟಿಸಿಕೊಳ್ಳುವುದ ಮಾತ್ರವಲ್ಲದೆ ಆಗಾಗ್ಗೆ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ. ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಷ್ಟಿçÃಯ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ ಮಾಡುತ್ತಿದ್ದು ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.
'ವಾಹನಗಳಲ್ಲಿ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳನ್ನು ಅಳವಡಿಸುವುದರಿಂದ ಎದುರು ಕಡೆಯಿಂದ ಸಂಚರಿಸುವ ವಾಹನಗಳಿಗೆ ರಸ್ತೆ ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಣ್ಣುಕುಕ್ಕುವ ಹೆಡ್‌ಲೈಟ್‌ಗಳನ್ನು ವಾಹನಗಳಿಗೆ ಅಳವಡಿಸಬೇಡಿ. ಸುರಕ್ಷಿತವಾಗಿ ವಾಹನ ಚಲಾಯಿಸಿ, ಅಮೂಲ್ಯ ಜೀವಗಳನ್ನು ರಕ್ಷಿಸಿ.' ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾಗೃತಿ ಮೂಡಿಸುವ ಸಂದೇಶವನ್ನು ಸರ್ಕಾರದ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಮುಖ್ಯಮಂತ್ರಿ ಅವರ ಈ ಕಳಕಳಿಯ ಸಂದೇಶಕ್ಕಾದರೂ ಪ್ರಖರ ಹೆಡ್‌ಲೈಟ್ ಅಳವಡಿಸುವ ವಾಹನ ಚಾಲಕರು ಬೆಲೆ ಕೊಟ್ಟು ಮತ್ತೊಬ್ಬರ ಅಮೂಲ್ಯ ಜೀವ ಉಳಿಸುವ ಸಂಕಲ್ಪ ತೊಡಬೇಕಿದೆ.
ರಸ್ತೆ ಅಪಘಾತಗಳನ್ನು ತಡೆಗಟ್ಟುವ ದೃಷ್ಟಿಯಿಂದ ಪೊಲೀಸ್ ಇಲಾಖೆ ವತಿಯಿಂದ ಕಾಲಕಾಲಕ್ಕೆ ವಿಶೇಷ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿರುತ್ತದೆ. ಸಂಚಾರ ನಿಯಮ ಉಲ್ಲಂಘನೆ ಕಂಡು ಬಂದರೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ವಾಹನಗಳಲ್ಲಿ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳನ್ನು ಅಳವಡಿಸುವುದರಿಂದ ಆಗುವ ಅಪಾಯಗಳ ಬಗ್ಗೆ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸುವವರಿAದ ದಂಡ ವಸೂಲಿ ಮಾಡಲಾಗುತ್ತಿದೆ.
ಡಾ. ಜಿ. ಪರಮೇಶ್ವರ, ಗೃಹ ಸಚಿವ
ನಮ್ಮಂಥ ಚಾಲಕರಿಗೆ ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಸಂಚಾರ ಸಂದರ್ಭ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳೇ ಪ್ರಮುಖ ಶತ್ರುಗಳಾಗಿವೆ. ಎದುರಿನ ಲೈಟ್ ನಮ್ಮ ಕಣ್ಣಿಗೆ ಬಿದ್ದರೆ ರಸ್ತೆಯೇ ಕಾಣದಂತೆ ಆಗಿಬಿಡುತ್ತದೆ. ಇದರಿಂದಾಗಿಯೇ ಬಹುತೇಕ ಸಂದರ್ಭಗಳಲ್ಲಿ ಅಪಘಾತಗಳಾಗುತ್ತದೆ. ಕನಿಷ್ಠ ಡಿಮ್‌ಡಿಪ್ ಮಾಡುವ ವ್ಯವಧಾನವೂ ಈಗಿನ ಚಾಲಕರಿಗೆ ಇಲ್ಲ.
ಪುಟ್ಟ, ಟ್ಯಾಕ್ಸಿ ಚಾಲಕ, ಕುಶಾಲನಗರ