ಲಂಚ ಪಡೆದ ಹೆಡ್ ಕಾನ್‌ಸ್ಟೇಬಲ್ ಲೋಕಾಯುಕ್ತ ಬಲೆಗೆ

6 mlv 4
ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಎದುರಿನ ಜ್ಯೂಸ್ ಕಾರ್ನರ್ ನಲ್ಲಿ ಗುರುವಾರ ರಾತ್ರಿ ಪಡೆಯುತ್ತಿದ್ದ ವೇಳೆ ವೆಂಕಟೇಶರನ್ನು ಲೋಕೋಯುಕ್ತ ಪೊಲೀಸರು ವಶಕ್ಕೆ ಪಡೆದ ಸಂದರ್ಭ.
Published on

ಮಳವಳ್ಳಿ: ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಹೆಡ್ ಕಾನ್‌ಸ್ಟೇಬಲ್ ಗುರುವಾರ ರಾತ್ರಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಗ್ರಾಮಾಂತರ ಠಾಣೆಯ ಮುಖ್ಯ ಪೇದೆ ವೆಂಕಟೇಶ ಆರೋಪಿ. ತಾಲೂಕಿನ ಅಂಚೇದೊಡ್ಡಿ ಗ್ರಾಮದ ನವೀನ್ ಕುಮಾರ್ ಅವರು ತಮ್ಮ ಕುಟುಂಬದವರ ವಿರುದ್ಧ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದ ವಿಚಾರಕ್ಕಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲು ಹೆಡ್‌ಕಾನ್‌ಸ್ಟೇಬಲ್ ವೆಂಕಟೇಶ್ ದೂರುದಾರನ ಬಳಿ 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಲೋಕಾಯುಕ್ತ ಪೊಲೀಸರ ತಂಡ ಗುರುವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿ ಪೊಲೀಸ್ ಠಾಣೆ ಎದುರಿನ ಜ್ಯೂಸ್ ಕಾರ್ನರ್‌ನಲ್ಲಿ ಬೀಡು ಬಿಟ್ಟು ದೂರುದಾರ ನವೀನ್ ಕುಮಾರ್‌ಗೆ ಕೆಮಿಕಲ್ ಮಿಶ್ರಿತ ನೋಟು ನೀಡಿ ವೆಂಕಟೇಶರನ್ನು ಸ್ಥಳಕ್ಕೆ ಬರಮಾಡಿಕೊಂಡಿದ್ದರು. ಬಳಿಕ ಜ್ಯೂಸ್ ಕಾರ್ನರ್‌ನಲ್ಲಿ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕೋಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನ ಹಾಗೂ ಡಿವೈಎಸ್ ಪಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಇನ್‌ಸ್ಪೆೆಕ್ಟರ್ ಲೇಪಾಕ್ಷ, ಬ್ಯಾಡರಾಯಿಗೌಡ ಸೇರಿದಂತೆ ಸಿಬ್ಬಂದಿ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net