ದೌರ್ಜನ್ಯ ತಡೆಯದವ ರಾಜಕಾರಣಿಯಾಗಲು ಅನರ್ಹ

A NARAYANASWAMY ctd
Published on

ಚಿತ್ರದುರ್ಗ: ಮಹಿಳೆಯರು ಮತ್ತು ಮಕ್ಕಳ ಮೇಲೆ ಲೈಂಗಿಕ ಸೇರಿ ಯಾವುದೇ ದೌರ್ಜನ್ಯ ನಡೆಯುತ್ತಿದೆ ಎಂಬುದು ತಿಳಿದ ಮೇಲೂ ತಡೆಗಟ್ಟಲು ವಿಫಲವಾದಲ್ಲಿ ನಾನೂ ಒಳಗೊಂಡಂತೆ ಯಾರೇ ಆಗಲಿ ಜನಪ್ರತಿನಿಧಿ, ಅಧಿಕಾರಿಯಾಗಲು ಅನರ್ಹ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಮಕ್ಕಳ ಸಹಾಯವಾಣಿ ಕೇಂದ್ರ-1098 ಉದ್ಘಾಟಿಸಿ ಮಾತನಾಡಿ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಹಾಜರಾತಿ ಹೆಚ್ಚಳ ಸಂಬಂಧ ವಿದ್ಯಾರ್ಥಿನಿಯರ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಯಾರೂ ಬಾಯಿ ಬಿಡದ ದುಸ್ಥಿತಿ ನಿರ್ಮಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಯೊಂದಿಗೆ ಚರ್ಚಿಸಿ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಘಟನೆ ಬೆಂಗಳೂರಿನಲ್ಲೇ ನಡೆಯಲಿ. ಆದರೆ, ಇಂತಹ ಕೃತ್ಯಗಳು ಸಮಾಜವನ್ನು ಬೆಚ್ಚಿ ಬೀಳಿಸಲಿವೆ. ನಮ್ಮ ಮೇಲೆ ಹೊಣೆಗಾರಿಕೆ ಇದ್ದು, ದುರ್ವ್ಯವಸ್ಥೆ ವಿರುದ್ಧ ಕ್ರಮ ಖಚಿತ. ಸಮಯ ಬಂದರೆ ಕಾಲೇಜಿನ ಹೆಸರು ಬಹಿರಂಗಪಡಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net