

ವಿಜಯಪುರ: ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ. ಹೀಗಾಗಿ ಪ್ರತಿಯೊಬ್ಬರು ಇತಿಹಾಸದ ತಿಳಿವಳಿಕೆ ಹೊಂದಬೇಕೆಂದು ಪ್ರೊ.ಸುಜಾತಾ ಕುರಂದವಾಡ ಹೇಳಿದರು.
ತಾಲೂಕಿನ ಜುಮನಾಳ ಗ್ರಾಮದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಹಾಗೂ 2ರ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಗುರುವಾರ ಅವರು ವಿಶೇಷ ಉಪನ್ಯಾಸ ನೀಡಿದರು.
ಇತಿಹಾಸವೆಂದರೆ ಕೇವಲ ಇಸ್ವಿಗಳು ಹಾಗೂ ಘಟನಾವಳಿಗಳ ಅಧ್ಯಯನವಲ್ಲ, ಇತಿಹಾಸದಲ್ಲಿ ಸಾಕಷ್ಟು ಜೀವನ ಮೌಲ್ಯಗಳು ಹಾಗೂ ಜೀವನದ ಪಾಠ ಅಡಗಿವೆ ಎಂದರು.
ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ.ಎಂ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜಶೇಖರ ಬೆನಕನಹಳ್ಳಿ, ಡಾ. ಭಾರತಿ ಹೊಸಟ್ಟಿ, ಪ್ರೊ.ಶ್ರೀಕಾಂತ ಬ್ಯಾಳಿ, ಪ್ರೊ. ನಾತುರಾಮ ಜಾಧವ, ಪ್ರೊ.ಸಿದ್ದಣ್ಣ ಬೀಡಗೊಂಡ, ಪ್ರೊ. ಮಾಲಾಶ್ರೀ ಕವಲಗಿ, ಪ್ರೊ.ರಮೇಶ ಕುಮಟಗಿ, ಪ್ರೊ. ಉಮೇಶ ಹಿರೇಮಠ, ಗ್ರಾಮದ ಹಿರಿಯರಾದ ಬಸನಗೌಡ ಪಾಟೀಲ, ಮಲ್ಲಿಕಾಜುನ ಸನಕಗೊಂಡ, ದುಂಡಪ್ಪ ಕೋಲಕಾರ, ಸಾಗರ ಕಾಪ್ಸೆ ಮತ್ತಿತರರಿದ್ದರು.
ಡಾ. ದಾವಲಸಾ ಪಿಂಜಾರ ಸ್ವಾಗತಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಚಿದಾನಂದ ಎಸ್. ಆನೂರ ನಿರೂಪಿಸಿದರು. ಪ್ರೊ. ರಮೇಶ ಬಳ್ಳೊಳ್ಳಿ ವಂದಿಸಿದರು.