ಕೇಕ್ ತರಲು ಹೋಗಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ; ಇಬ್ಬರು ಆರೋಪಿಗಳ ಬಂಧನ

Crime
Published on

ಬಳ್ಳಾರಿ : ಹೊಸ ವರ್ಷದ ಆಚರಣೆಗಾಗಿ ಕೇಕ್ ತರಲು ಹೋಗಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಗಳಿಬ್ಬರನ್ನು ಬ್ರೂಸ್‌ಪೇಟೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಶ್ರೀರಾಂಪುರ ಕಾಲನಿಯ ಮುಖೇಶ್ (23) ಮತ್ತು ರಾಜೇಶ್ ಬಂಧಿತರು. ಬಳ್ಳಾರಿ ನಗರದ ವಡ್ಡರಬಂಡೆಯಲ್ಲಿರುವ ಬೇಕರಿವೊಂದರ ಬಳಿ ಕೇಕ್ ಖರೀದಿಸಲು ಹೋಗಿದ್ದ ಆರ್.ಕೆ.ಕಾಲನಿಯ ನಿವಾಸಿ ಸೈಯ್ಯದ್ ವಲಿ ಹಾಗೂ ಆತನ ಸಹೋದರ ರಜಾಕ್ ವಲಿ ಮೇಲೆ ಬೈಕ್ ನಿಲ್ಲಿಸುವ ವಿಚಾರದಲ್ಲಿ ಮುಖೇಶ್ ಮತ್ತು ಆತನ ಸಹಚರರು ಗಲಾಟೆ ಮಾಡಿದ್ದಾರೆ.

ಈ ವೇಳೆ ಮದ್ಯ ಸೇವಿಸಿ ನಶೆಯಲ್ಲಿದ್ದ ಮುಖೇಶ್ ಏಕಾಏಕಿ ಸೈಯ್ಯದ್ ವಲಿ ಮತ್ತು ಆತನ ಸಹೋದರನಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಸೈಯ್ಯದ್‌ವಲಿ ಮೃತಪಟ್ಟಿದ್ದು, ಆತನ ಸಹೋದರ ರಜಾಕ್‌ವಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಿಸಲಾಗಿದೆ.

ಮುಖೇಶ್‌ಗೆ ಕ್ರಿಮಿನಲ್ ಹಿನ್ನೆಲೆ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net