ಪ್ರಕೃತಿ, ಆರೋಗ್ಯ ಸಂಪತ್ತು ಎಂದಿಗೂ ಮರಳಿ ಬಾರವು

JLR ph 1 Aug 13 Vishwa Prakruthi Day
Published on

ಜಗಳೂರು: ಜೀವನದಲ್ಲಿ ಹಣ, ಅಂತಸ್ತು ಕಳೆದುಕೊಂಡರೆ ಹೇಗಾದರೂ ಸಂಪಾದಿಸಬಹುದು ಆದರೆ ಪ್ರಕೃತಿಯ ಮುನಿಸು ಹಾಗೂ ಆರೋಗ್ಯ ಕಳೆದುಕೊಂಡರೆ ಮರಳಿ ಪಡೆಯುವುದು ಅಸಾಧ್ಯ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಬಯಲು ರಂಗಮಂದಿರಲ್ಲಿ ಭಾನುವಾರ ಪಟ್ಟಣ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ವಿಶ್ವ ಪ್ರಕೃತಿ ದಿನಾಚರಣೆ, ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶ ಎಷ್ಟು ಮುಖ್ಯನೋ ಪ್ರಕೃತಿಯೂ ಅಷ್ಟೇ ಮುಖ್ಯ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೃಕ್ಷವನ್ನು ರಕ್ಷಣೆ ಮಾಡಿದರೆ ಅದು ಉಸಿರಿರುವರೆಗೂ ನಮ್ಮನ್ನು ರಕ್ಷಣೆ ಮಾಡುತ್ತದೆ. ಒಂದು ಬಾಟಲಿ ನೀರು ಖರೀದಿಸಿದರೂ ಬೆಲೆ ಕೊಡಬೇಕು. ಆದರೆ ಕೋಟ್ಯಂತರ ಜನರಿಗೆ ಆಶ್ರಯ ನೀಡಿರುವ ಪ್ರಕೃತಿ ಯಾವ ಬೆಲೆ ಕಟ್ಟುವುದಿಲ್ಲ, ಆದರೆ ಅದನ್ನು ರಕ್ಷಣೆ ಮಾಡುವುದನ್ನು ಮರೆತು ಹಾಳು ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕ್ಷೇತ್ರದ ಮತದಾರರು ಮತ ನೀಡಿ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವುದು ನನ್ನ ಕರ್ತವ್ಯ, ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಅಭಿವೃದ್ಧಿ ಕಾರ‌್ಯಗಳೇ ಉತ್ತರ ನೀಡುವಂತೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪ.ಪಂಸದಸ್ಯರಾದ ರಮೇಶ್, ರವಿಕುಮಾರ್, ಮಂಜುನಾಥ್, ಎನ್‌ಎಂಕೆ ಲೋಕೇಶ್. ಉಪನ್ಯಾಸಕ ನಾಗೇಶ್, ತಿಪ್ಪೇಸ್ವಾಮಿ. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮುಖಂಡ ಮಹಮದ್ ಗೌಸ್, ನಿವೃತ್ತ ಉಪನ್ಯಾಸಕ ಸಂಷೀರ್ ಅಹಮದ್, ಪ್ರಬಾರ ಬಿಇಒ ಸುರೇಶ್ ರೆಡ್ಡಿ, ಪಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್, ಗ್ರಾಪಂ ಕಾರ್ಯದರ್ಶಿ ಭರಮಗೌಡ, ನಾಗರಾಜ್ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net