ಸಮಾಜದಲ್ಲಿ ವಕೀಲರ ಪಾತ್ರ ಮಹತ್ವದ್ದು

judge
Published on

ಅಂಕೋಲಾ: ಸಮಾಜದಲ್ಲಿ ವಕೀಲರ ಪಾತ್ರ ಬಹಳ ಮಹತ್ವದ್ದು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಹೇಳಿದರು.

ಇಲ್ಲಿನ ನ್ಯಾಯಾಲಯದ ಹೊರ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಕೀಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ‘ವಕೀಲರ ಸತತ ಶ್ರಮ, ಓದು, ಜ್ಞಾನ ಇವೆಲ್ಲವೂ ನ್ಯಾಯಾಂಗ ವ್ಯವ ಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಅಂಕೋಲಾ ವಕೀಲರು ಸಹ ಅಷ್ಟೇ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ ಮಾತನಾಡಿ, ನ್ಯಾಯವಾದಿಗಳು ಶ್ರಮದ ಮೂಲಕ ಉತ್ತಮ ಹುದ್ದೆ ಅಲಂಕರಿಸಲು ಸಾಧ್ಯ. ಒಬ್ಬ ಉತ್ತಮ ನ್ಯಾಯಾಧೀಶರಾಗಲು ಸತತ ಶ್ರಮ ಅಗತ್ಯ. ನ್ಯಾಯಾಂಗ ವ್ಯವಸ್ಥೆಗೆ ಎಲ್ಲಿಯೂ ಚ್ಯುತಿ ಬಾರದಂತೆ ನ್ಯಾಯಾಧೀಶರಾದವರು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ. ನ್ಯಾಯಾಧೀಶರ ಜತೆಯಲ್ಲಿ ಪ್ರತಿಯೊಬ್ಬ ನ್ಯಾಯವಾದಿಗಳ ಸಹಕಾರ ಅಗತ್ಯ ಎಂದರು.

ವಕೀಲರ ಸಂಘದ ವತಿಯಿಂದ ನ್ಯಾಯಾಧೀಶರಾದ ಮನೋಹರ ಎಂ., ಅರ್ಪಿತಾ ಬೆಲ್ಲದ ಮತ್ತು ವಕೀಲರಾದ ಗುರು ನಾಯ್ಕ, ಗಜಾನನ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ ನಾಯಕ ಅಧ್ಯಕ್ಷತೆವಹಿಸಿ ಮಾತನಾಡಿದರು.

ಎಪಿಪಿ ಗಿರೀಶ ಪಟಗಾರ, ಶಿಲ್ಪಾ ನಾಯ್ಕ ಮಂಜಗುಣಿ, ನ್ಯಾಯವಾದಿಗಳಾದ ಎಂ.ಪಿ. ಭಟ್, ಬಿ.ಡಿ. ನಾಯ್ಕ, ನಾಗಾನಂದ ಐ.ಬಂಟ, ನಿತ್ಯಾನಂದ ಕವರಿ, ಶಾಂತಾ ಹೆಗಡೆ, ಬಿ.ಟಿ. ನಾಯಕ, ಎನ್.ಆರ್. ನಾಯಕ ಶಿಳ್ಯೆ, ಎನ್.ಎಸ್. ಪ್ರಸಾದ, ಮಮತಾ ಕೆರೆಮನೆ ಇತರರು ಇದ್ದರು. ಉಮೇಶ ಎನ್. ನಾಯ್ಕ, ವಿನೋದ ಶಾನಭಾಗ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net