ಮೂಲಸೌಲಭ್ಯ ಪರಿಶೀಲಿಸಿದ ಶಾಸಕ ಟೆಂಗಿನಕಾಯಿ

New Tenginakayi New
Published on

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.48 ರ ವ್ಯಾಪ್ತಿಯ ನೇಕಾರ ಕಾಲನಿ, ಗುರುದತ್ತ ಕಾಲನಿ, ವಿದ್ಯಾವನ ಹಾಗೂ ಸಿದ್ದೇಶ್ವರ ಪಾರ್ಕ್ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಹಾಳಾದ ವಿದ್ಯುತ್ ಕಂಬಗಳನ್ನು ತೆರವು ಗೊಳಿಸುವುದು, ರಸ್ತೆ, ಗಟಾರು, ಒಳಚರಂಡಿ ಕಾಮಗಾರಿ ಹಾಗೂ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಾರ್ವಜನಿಕರು ಶಾಸಕರಿಗೆ ಮನವಿ ಮಾಡಿದರು. ಸಮಸ್ಯೆಗಳಿಗೆ ಪರಿಹಾರ ನೀಡಲು ಹಾಗೂ ಸಿದ್ದೇಶ್ವರ ಪಾರ್ಕ್​ನಲ್ಲಿ ಫುಟ್​ಪಾತ್ ಮೇಲೆ ಹಾಕಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ನೇಕಾರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪೆವರ್ಸ್​ಗಳನ್ನು ಹಾಕಿಕೊಡುವ ಭರವಸೆ ನೀಡಿದದರು.

ಪ್ರಮುಖರಾದ ಗೋವರ್ಧನ ರಾವ್, ರಮೇಶ ಬೆಳಗಾವಿ, ಪುಂಡಲೀಕಪ್ಪ ಕುರಟ್ಟಿ, ಕೃಷ್ಣ ಉಪ್ಪೇರ, ಲಿಂಗರಾಜ ಬೆಳ್ಳಿಗಟ್ಟಿ, ಪರಶುರಾಮ ಇಡಕೆ, ಸಂಗೀತಾ ಇಜರಾದೆ, ಜಯಶ್ರೀ ಗರಗದ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net