ತಾಯಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ!

0701
ಲಕ್ಷ್ಮೀದೇವಿ ವಾಸವಿದ್ದ ಮನೆಯ ಬಳಿ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ನಾಗೇಶ್, ಡಿವೈಎಸ್‌ಪಿ ಮೋಹನ್ ಹಾಗೂ ಜಿಗಣಿಯ ಇನ್‌ಸ್ಪೆಕ್ಟರ್ ಮಂಜುನಾಥ್ ಪರಿಶೀಲನೆ ನಡೆಸಿದರು.
Published on

ಕುಡಿದು ಆರೋಗ್ಯ ಹಾಳುಮಾಡಿಕೊಳ್ಳಬೇಡ ಎಂದಿದ್ದಕ್ಕೆ ಕೊಲೆ

ಲಕ್ಷ್ಮೀದೇವಿ ವಾಸವಿದ್ದ ಮನೆಯ ಬಳಿ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್‌ಪಿ ನಾಗೇಶ್, ಡಿವೈಎಸ್‌ಪಿ ಮೋಹನ್ ಹಾಗೂ ಜಿಗಣಿಯ ಇನ್‌ಸ್ಪೆಕ್ಟರ್ ಮಂಜುನಾಥ್ ಪರಿಶೀಲನೆ ನಡೆಸಿದರು.

ರಮೇಶ್ ಚಂದಾಪುರ ಹಾಗೂ ಹಳೇ ಚಂದಾಪುರ ವ್ಯಾಪ್ತಿಯಲ್ಲಿನ ತಳ್ಳುವ ಗಾಡಿ ಹಾಗೂ ಹೋಟೆಲ್‌ಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ನಿತ್ಯ ಕುಡಿಯುತ್ತಿದ್ದ. ಈತನಿಗೆ ಮೂರ್ಛೆ ರೋಗವಿದ್ದ ಕಾರಣ ತಾಯಿ ಕುಡಿಯಬೇಡ, ಆರೋಗ್ಯ ಹಾಳಾಗುತ್ತದೆ ಎಂದು ಬುದ್ಧಿ ಹೇಳುತ್ತಿದ್ದರು.

ಮೂರ್ಛೆ ರೋಗದಿಂದ ಬಳಲುತ್ತಿದ್ದ

ಮನೆಯಲ್ಲಿ ಪತಿ ಮಂಜಣ್ಣ, ಪತ್ನಿ ಲಕ್ಷ್ಮೀದೇವಿ ಮಗ ರಮೇಶ್ ವಾಸ ಇದ್ದರು. ದಂಪತಿಗೆ ನಾಲ್ಕು ಮಕ್ಕಳಿದ್ದು, ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಕೊಡಲಾಗಿತ್ತು. ಮೊದಲನೇ ಮಗ ತಿಪ್ಪೇಶ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ. ಶನಿವಾರ ರಾತ್ರಿ 10.45ಕ್ಕೆ ಈತ ಮನೆಗೆ ಬಂದಿದ್ದಾನೆ, ಆಗ ತಾಯಿ ಹಾಗೂ ಸಹೋದರ ಮೃತಪಟ್ಟಿರುವುದು ಗೊತ್ತಾಗಿದೆ.

ವಾರದ ರಜೆಗೆ ಮನೆಗೆ ಬಂದ ಮಗನಿಗೆ ಆಘಾತ

ಹಲವು ವರ್ಷಗಳ ಹಿಂದೆ ಉದ್ಯೋಗ ಅರಸಿ ಬಂದ ಲಕ್ಷ್ಮೀದೇವಿ ದಂಪತಿ ಹಾಗೂ ಇಬ್ಬರು ಮಕ್ಕಳು ಹಳೇ ಚಂದಾಪುರದಲ್ಲಿ ವಾಸವಿದ್ದರು. ಶನಿವಾರ ರಾತ್ರಿ ಕುಡಿದ ಮತ್ತಿನಲ್ಲಿದ್ದ ರಮೇಶ್ ತಾಯಿ ಜತೆ ಗಲಾಟೆ ಮಾಡಿದ್ದಾನೆ. ಬಳಿಕ ಮಲಗಿದ್ದ ತಾಯಿಯ ಕುತ್ತಿಗೆಗೆ ಮೊಬೈಲ್ ಚಾರ್ಜಿಂಗ್ ವೈರ್ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾಯಿ ಸತ್ತಿದ್ದಾಳೆ ಎನ್ನುವುದು ಗೊತ್ತಾಗಿ ಅದೇ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲಕ್ಷ್ಮೀದೇವಿ ಅವರ ಪತಿ ಮಂಜಣ್ಣ ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಎರಡನೇ ಪಾಳಿಯಲ್ಲಿ ಕೆಲಸಕ್ಕೆ ಹೋಗಿದ್ದರು. ರಾತ್ರಿ ಮನೆಗೆ ವಾಪಾಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ, ಮಾಹಿತಿ ತಿಳಿದ ಸೂರ್ಯನಗರ ಪೊಲೀಸರು ಮೃತದೇಹಗಳನ್ನು ಅತ್ತಿಬೆಲೆಯ ಆಕ್ಸ್‌ರ್ಡ್ ಆಸ್ಪತ್ರೆಗೆ ರವಾನೆ ಮಾಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಆನೇಕಲ್: ಕುಡಿದ ಮತ್ತಿನಲ್ಲಿ ತಾಯಿಯನ್ನೇ ಕೊಂದ ಪುತ್ರ ಬಳಿಕ ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಲೇ ಚಂದಾಪುರದಲ್ಲಿ ವಾಸವಿದ್ದ ಮೂಲತಃ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಿಕ್ಕಹಳ್ಳಿ ಮೂಲದ ಲಕ್ಷ್ಮೀದೇವಿ (41) ಕೊಲೆಯಾದವರು. ಆಕೆಯ ಪುತ್ರ ರಮೇಶ್ (21)ಆತ್ಮಹತ್ಯೆ ಮಾಡಿಕೊಂಡವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net