ಬಾವಿ ತೋಡುತ್ತಿದ್ದಾಗ ಬಿದ್ದು ಮೃತ್ಯು

Death Case
Published on

ಕುಂದಾಪುರ: ಗೋಪಾಡಿ ಗ್ರಾಮದ ಮೂಡುಗೋಪಾಡಿ ಎಂಬಲ್ಲಿ ಬಾವಿ ತೋಡುತ್ತಿದ್ದಾಗ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಬಳ್ಕೂರು ಗ್ರಾಮದ ಸುಭಾಶ್(50) ಎಂಬುವರು ಮೃತಪಟ್ಟಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಕರುಣಾಕರ ಎಂಬುವರ ಜಾಗದಲ್ಲಿ ಬಾವಿ ತೋಡುವ ಕೆಲಸ ವಾಡುತ್ತಿದ್ದರು. ಬಾವಿಯ ರಿಂಗ್ ಬದಿ ಅಳವಡಿಸಿದ್ದ ಪೈಪ್ ಬಾವಿಗೆ ಬಿದ್ದಿದ್ದು, ಅದನ್ನು ತೆಗೆಯಲೆಂದು ಇಳಿದಿದ್ದರು. ಹಗ್ಗದ ಸಹಾಯದಿಂದ ಮೇಲೆ ಬರುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net