ಪತ್ನಿಯ ತಲೆ ಕತ್ತರಿಸಿ ಪೊಲೀಸ್​ ಠಾಣೆಗೆ ತಂದ!

Untitled-2
Published on

ಆನೇಕಲ್​ : ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಪತ್ನಿಯ ತಲೆ ಕತ್ತರಿಸಿದ ಪತಿ ನೇರವಾಗಿ ಸೂರ್ಯನಗರ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಹೆಬ್ಬಗೋಡಿ ನಿವಾಸಿ ಮಾನಸಾ(26) ಕೊಲೆಯಾಗಿದ್ದು, ಪತಿ ಶಂಕರ್​(26)ಠಾಣೆಗೆ ರುಂಡದೊಂದಿಗೆ ಹೋಗಿ ಶರಣಾಗಿದ್ದಾನೆ.

ಐದು ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದ ಕಾಚನಾಯಕನಹಳ್ಳಿ ದಿಣ್ಣೆ ನಿವಾಸಿ ಶಂಕರ್​ ಮತ್ತು ಮಾನಸಾ ದಂಪತಿ ಅನ್ಯೋನ್ಯವಾಗಿದ್ದರು. ಅತ್ತೆ, ಮಾವನ ಜತೆ ತಕರಾರು ಮಾಡಿಕೊಂಡು ಎರಡು ತಿಂಗಳ ಹಿಂದೆ ಗಂಡನನ್ನು ಕರೆದುಕೊಂಡು ಬಂದು ಹೀಲಲಿಗೆ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಮಾನಸಾ ವಾಸವಿದ್ದಳು. ಆದರೆ ನಾಲ್ಕು ವರ್ಷದ ಹೆಣ್ಣು ಮಗು ಶಂಕರ್​ ತಾಯಿಯ ಮನೆಯಲ್ಲಿಯೇ ಇತ್ತು. ಐಪಿಎಲ್​ ರೈನಲ್​ ನಡೆಯುತ್ತಿದ್ದಾಗ ಕೆಲಸದ ನಿಮಿತ್ತ ಶಂಕರ್​ ಹೊರ ಹೋಗಿದ್ದ. ವಿಚಾರ ತಿಳಿದಿದ್ದ ಮಾನಸಾ ಪ್ರಿಯಕರ ಮುಗಿಲನ್​ ಎಂಬಾತನನ್ನು ಮನೆಗೆ ಕರೆಸಿಕೊಂಡಿದ್ದಾಳೆ ಎನ್ನಲಾಗಿದೆ.

ಕೆಲಸ ಬೇಗ ಮುಗಿದಿದ್ದರಿಂದ ರಾತ್ರಿ 1 ಗಂಟೆ ಸುಮಾರಿಗೆ ಶಂಕರ್​ ಮನೆಗೆ ಬಂದಾಗ ಪತ್ನಿ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿದ್ದಳು. ಇಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಇಬ್ಬರೂ ಪರಾರಿಯಾಗಿದ್ದರು. ಶುಕ್ರವಾರ ರಾತ್ರಿ ಗಂಡ ಬೇಕು ಎಂದು ಮಾನಸಾ ಮನೆ ಬಳಿ ಬಂದಿದ್ದಾಳೆ. ಆಗ ಹರಿತವಾದ ಮಚ್ಚಿನಿಂದ ಕೈ ಹಾಗೂ ಕುತ್ತಿಗೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ತುಂಬ ಹೊತ್ತು ಮನೆಯಲ್ಲೇ ಇದ್ದ ಶಂಕರ್​ ರಾತ್ರಿ ಒಂದು ಗಂಟೆ ಸುಮಾರಿಗೆ ತನ್ನ ಸ್ಕೂಟರ್​ ನಲ್ಲಿ ರುಂಡವನ್ನು ಇಟ್ಟುಕೊಂಡು ಸೂರ್ಯನಗರ ಠಾಣೆಗೆ ಬಂದು ಶರಣಾಗಿದ್ದಾನೆ.

ಮುಗಿಲನ್​ಗಾಗಿ ಶೋಧ : ಪತ್ನಿ ಮತ್ತು ಮಗಳಿಗಾಗಿ ಹಗಲಿರುಳು ಶಂಕರ್​ ದುಡಿಮೆ ಮಾಡುತ್ತಿದ್ದರೆ, ತಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿದ್ದ ಮುಗಿಲನ್​ ಜತೆ ಅಕ್ರಮ ಸಂಬಂಧ ಇಟ್ಟುಕೊಂಡು ಮಾನಸಾ ಬರ್ಬರವಾಗಿ ಕೊಲೆಯಾಗಿದ್ದಾಳೆ. ಸೂರ್ಯನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಸಿ.ಪಿ.ಐ ಸಂಜೀವ ಮಹಾಜನ್​ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದು, ಅಕ್ರಮ ಸಂಬಂಧ ಹೊಂದಿದ್ದ ಮುಗಿಲನ್​ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net