ಜೈಲಿನಿಂದ ಪತ್ನಿಗೆ ಕರೆ ಮಾಡಿ ಜೀವ ಬೆದರಿಕೆ

sogane centrol jail
ಸೋಗಾನೆ ಕೇಂದ್ರ ಕಾರಾಗೃಹ
Published on

ಶಿವಮೊಗ್ಗ: ಸೋಗಾನೆ ಕೇಂದ್ರ ಕಾರಾಗೃಹದಿಂದ ಕೈದಿಯೊಬ್ಬ ಪತ್ನಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡುತ್ತಿದ್ದು ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ ಜೈಲಿನಿಂದ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿರುವ ಖೈದಿ ನಾಗರಾಜ ಎಂತಾನ ಪತ್ನಿಗೆ ಜೈಲಿನಿಂದಲೇ ಕರೆ ಮಾಡುತ್ತಿದ್ದಾನೆ. 2024ರ ಮಾರ್ಚ್ ತಿಂಗಳಿಂದ ಹಲವು ಭಾರಿ ಕರೆ ಮಾಡಿ ಒಂದು ಸಾವಿರ ರೂ., ಎರಡು ಸಾವಿರ ರೂ. ಹಣ ಹಾಕುವಂತೆ ಒತ್ತಾಯಿಸುತ್ತಿದ್ದಾನೆ. ಹಣ ಹಾಕದಿದ್ದಲ್ಲಿ ಜೈಲಿನಿಂದ ಹೊರ ಬಂದ ನಂತರ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾನೆಂದು ಆರೋಪಿಸಿ ಆತನ ಪತ್ನಿ ದೂರು ನೀಡಿದ್ದಾಳೆ.
ಇತೀಚಿನ ದಿನಗಳಲ್ಲಿ ಜೈಲುಗಳಲ್ಲಿ ಕೈದಿಗಳಿಗೂ ರಾಜಾಥಿತ್ಯ ಸಿಗುತ್ತಿರುವ ಆರೋಪ ಕೇಳಿಬಂದಿದ್ದು ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ಶಿವಮೊಗ್ಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ಮೊಬೈಲ್ ಚಾರ್ಜರ್‌ಗಳು ಸಿಕ್ಕಿದ್ದವು. ಇದೀಗ ಮತ್ತೆ ಕೈದಿಗಳು ಮೊಬೈಲ್ ಬಳಕೆ ಮಾಡುತ್ತಿರುವುದು ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net