ಲಿಂಗಾಯತ ಧರ್ಮ ಪ್ರತ್ಯೇಕ ಮಾಡಲು ಹೋಗಿ ಜೇನುಗೂಡಿಗೆ ಕೈ ಹಾಕಿ 2018ರಲ್ಲಿ ಕೈ ಸುಟ್ಟುಕೊಂಡಿದ್ದರು

He burned his hand in 2018 by putting his hand in a beehive to separate the Lingayat religion.
Published on

ಗುಳೇದಗುಡ್ಡ:ಲಿಂಗಾಯತ ಧರ್ಮ ಪ್ರತ್ಯೇಕ ಮಾಡಲು ಹೋಗಿ ಜೇನುಗೂಡಿಗೆ ಕೈ ಹಾಕಿ 2018ರಲ್ಲಿ ಕೈ ಸುಟ್ಟುಕೊಂಡಿದ್ದರು. ಸಿಎಂ ಸಿದ್ರಾಮಯ್ಯ ಮತ್ತೆ ಜೇನುಗೂಡಿಗೆ ಕೈ ಹಾಕಿದ್ದಾರೆ. ಆ ಜೇನು ಹುಳಗಳಿಂದ ಕಡಿಯುವುದು ತಪ್ಪಿಸಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದಿದ್ದೆವು. ಆದರೆ ಅವರು ಅಲ್ಲಿಗೆ ಹೋಗಿದ್ದರಿಂದ ಸರ್ಕಾರದಲ್ಲಿ ಗೊಂದಲ ಉಂಟಾಗಲಿದೆ. ಇದೇ ನವೆಂಬರ್​ನಲ್ಲಿ ಸಿದ್ದರಾಮಯ್ಯನವರ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಕೋಟೆಕಲ್ಲಿನ ಅಮರೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಬಸವ ಸಂಸತಿ ಸಮಾರೋಪಕ್ಕೆ ಹೋಗಿದ್ದು ಸಂತೋಷ ತಂದಿದೆ. ಬಸವಣ್ಣನವರ ಇತಿಹಾಸ ಪ್ರಚುರಪಡಿಸಲು ಬಸವಣ್ಣನವರನು ್ನಸಾಂಸತಿಕ ನಾಯಕನಾಗಿ ಆಯ್ಕೆ ಮಾಡಿದ್ದು, ನಮ್ಮ ಮೆಟ್ರೋಗೆ "ಬಸವ ಮೆಟ್ರೋ' ಎಂದು ಹೆಸರಿಡಲು ನಿರ್ಧಾರ ಮಾಡಿದ್ದು ಸ್ವಾಗತಾರ್ಹ. ಆದರೆ 2018ರಲ್ಲಿ ಲಿಂಗಾಯತ ಧರ್ಮ ಪ್ರತ್ಯೇಕ ಮಾಡಲು ಹೋಗಿ ದೊಡ್ಡ ಆಘಾತ ಅನುಭವಿಸಿದ್ದರು. ಈಗ ಅದೇ ಮಾದರಿಯಲ್ಲಿ ಹೋಗಿ ಸಂಕಷ್ಟ ಅನುಭವಿಸುವ ಸಾಧ್ಯತೆಗಳಿವೆ ಎಂದರು.

ಕೆಲವು ಸಚಿವರು ವೀರಶೈವ ಲಿಂಗಾಯತದ ಕಡೆ, ಕೆಲ ಸಚಿವರು ಲಿಂಗಾಯತದ ಕಡೆಗೆ ಇರುವುದರಿಂದ ಸರ್ಕಾರದಲ್ಲಿ ಗೊಂದಲ ಉಂಟಾಗಿದ್ದು, ಇದು ನವೆಂಬರ್​ನಲ್ಲಿ ಸಿದ್ದರಾಮಯ್ಯವರ ಸ್ಥಾನಕ್ಕೆ ಹೆಚ್ಚು ಕಡಿಮೆಯಾಗಬಹುದು.ನಾವೆಲ್ಲ ಹಿಂದು ಧರ್ಮದ ಆಚರಣೆ ಮಾಡುತ್ತಿರುವುದರಿಂದ ನಾವು ಹಿಂದುಗಳೇ, ಸರ್ಕಾರದಲ್ಲಿನ ಕೆಲವು ಸಚಿವರು ಆ ಕಡೆ, ಈ ಕಡೆ ಇದ್ದಾರೆ. ಸಚಿವ ಸ್ಥಾನ ಉಳಿಯಬೇಕಾದರೆ, ನೀವೆಲ್ಲ ಒಂದು ಕಡೆ ಕುಳಿತು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ನೀವೆಲ್ಲ ಒಂದಾಗಬೇಕು, ಮುಖ್ಯವಾಗಿ ಸಿದ್ದರಾಮಯ್ಯನವರು ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಎರಡೂ ಒಂದಾಗಿಸುವ ಕೆಲಸ ಮಾಡಿದರೆ ನಿಮ್ಮ ಸ್ಥಾನ ಶಾಶ್ವತವಾಗಿ ಉಳಿಯುತ್ತದೆ. ಇಲ್ಲವಾದರೆ ನವೆಂಬರ್​ನಲ್ಲಿ ನಿಮಗೆ ಕುತ್ತು ಬರಬಹುದು ಎಂದು ಎಚ್ಚರಿಸಿದರು.

ಅಮರೇಶ್ವರ ಮಠದ ನೀಲಕಂಠ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net