

ಹೊಳೆನರಸೀಪುರ: ಮಾಜಿ ಸಿಚವ ಎಚ್.ಡಿ. ರೇವಣ್ಣ ಸೋಮವಾರ ಕುಟುಂಬ ಸಮೇತರಾಗಿ ನಾಮಪತ್ರ ಸಲ್ಲಿಸಿದ್ದು ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಮಾವಿನಕಾಯಿ ಬೆಟ್ಟದ ರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ರಂಗನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಹೊಳೆನರಸೀಪುರದ್ಲಿ ಬೃಹತ್ ಬೈಕ್ ರ್‍ಯಾಲಿ ಹಾಗೂ ಸಾವಿರಾರು ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸೂರಜ್ ಹಾಗೂ ಪ್ರಜ್ಷಲ್ ತಮ್ಮ ತಂದೆಗೆ ಸಾಥ್ ನೀಡಿದ್ದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಹೆಸರಿನಲ್ಲಿ 7.36 ಕೋಟಿ ರೂ ಚರಾಸ್ತಿ, 36.01 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಭವಾನಿ ರೇವಣ್ಣ ಹೆಸರಲ್ಲಿ 8.66 ಕೋಟಿ ರೂಪಾಯಿ ಚರಾಸ್ತಿ ಹಾಗೂ 29.58 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ಧಾರೆ.
ಎಚ್.ಡಿ.ರೇವಣ್ಣ ಬಳಿ 320 ಗ್ರಾಂ ಚಿನ್ನಾಭರಣ, 6.5ಕೆಜಿ ಬೆಳ್ಳಿ ಇದೆ. ಪತ್ನಿ ಭವಾನಿ ರೇವಣ್ಣ ಬಳಿ 45ಕೆಜಿ ಬೆಳ್ಳಿ, 3 ಕೆಜಿ ಚಿನ್ನ, 25 ಕ್ಯಾರೆಟ್ ವಜ್ರದ ಆಭರಣಇದೆ. ಇದರ ಒಟ್ಟು ಮೌಲ್ಯ 2.20 ಕೋಟಿ ರೂ ಎಂದು ತಮ್ಮ ನಾಮಪತ್ರದಲ್ಲಿ ತಿಳಿಸಲಾಗಿದೆ.
ಎಚ್.ಡಿ.ರೇವಣ್ಣ ತಾಯಿ ಚೆನ್ನಮ್ಮ 60 ಲಕ್ಷ ರೂ, ತಂದೆ ದೇವೇಗೌಡರಿಂದ 31 ಲಕ್ಷ ರೂ ಸಾಲ ಪಡೆದಿದ್ದಾರೆ. ಸಹೋದರ್ ರಮೇಶ್ ಬಳಿ 4 ಕೋಟಿ ಸಾಲ ಪಡೆದಿದ್ದು ಮನೆ ನಿರ್ಮಾಣಕ್ಕೆ 2 ಕೋಟಿ ರೂ ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ.
ಇನ್ನು ಪತ್ನಿ ಭವಾನಿ ರೇವಣ್ಣ ಕೂಡ 5.28 ಕೋಟಿ ರೂ ಸಾಲ ಮಾಡಿರುವುದಾಗಿ ಮಾಜಿ ಎಚ್.ಡಿ.ರೇವಣ್ಣ ನಾಮಪತ್ರದ ಜೊತೆಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ತಿಳಿಸಿದ್ಧಾರೆ.